ನವದೆಹಲಿ : ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಿಂದ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯನ್ನು 22 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ವಾಸ್ತವವಾಗಿ, ಈ ಘಟನೆ ಜಬಲ್ಪುರದ ಬೆಲ್ಬಾಗ್ನಲ್ಲಿ ನಡೆದಿದೆ. ನಾಲ್ವರು ಯುವಕರು ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಬಹಿರ್ದೆಸೆಗೆಂದು ಹೋದ ವೇಳೆ ನಾಲ್ವರು ಯುವಕರು ಅಪಹರಿಸಿದ್ದಾರೆ. ಬಳಿಕ ಒತ್ತೆಯಾಳಾಗಿಟ್ಟುಕೊಂಡು ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದಾರೆ. ವಿಷಯ ಯಾರಿಗಾದ್ರೂ ಹೇಳಿದ್ರೆ ಕೊಲ್ಲುವುದಾಗಿ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಲ್ಬಾಗ್ನಲ್ಲಿ ವಾಸಿಸುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯನ್ನು 22 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು ಮತ್ತು 4 ಯುವಕರಿಂದ ಪದೇ ಪದೇ ಸಾಮೂಹಿಕ ಅತ್ಯಾಚಾರವೆಸಗಲಾಯಿತು. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ನೆರೆಹೊರೆಯಲ್ಲಿ ವಾಸವಾಗಿರುವ ಆರ್ಯನ್ (24) ಎಂಬ ಯುವಕ ಅಪ್ರಾಪ್ತ ಬಾಲಕಿಯನ್ನು ಮನವೊಲಿಸಿ ಇಂದಿರಾ ಮಾರುಕಟ್ಟೆಗೆ ಕರೆದೊಯ್ದಿದ್ದಾನೆ. ನಂತರ ಆತನ ಮೂವರು ಗೆಳೆಯರಾದ ನಿಹಾಲ್, ಅನ್ಶುಲ್ ಮತ್ತು ಗೋಲು ಕೂಡ ಅಲ್ಲಿಗೆ ತಲುಪಿದ್ದಾರೆ. ನಾಲ್ವರೂ ಸರದಿಯಂತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದರು.
ಶುಕ್ರವಾರ ಸಂಜೆ 7 ಗಂಟೆಯಿಂದ ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಲ್ವರೂ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ನನ್ನನ್ನೂ ಥಳಿಸಿದರು. ಇದಾದ ಬಳಿಕ ಶನಿವಾರ ಸಂಜೆ 4 ಗಂಟೆಗೆ ಆರ್ಯನ್ ನನ್ನನ್ನು ಬೈಕ್ ನಲ್ಲಿ ನನ್ನ ಮನೆ ಬಳಿ ಡ್ರಾಪ್ ಮಾಡಿದ್ದಾನೆ. ನಾಲ್ವರೂ ನನಗೆ ಕೊಲೆ ಬೆದರಿಕೆ ಹಾಕಿದ್ದರು. ಎರಡು ದಿನ ಸುಮ್ಮನಿದ್ದೆ. ನಂತರ ಅಮ್ಮನಿಗೆ ವಿಷಯವನ್ನೆಲ್ಲ ಹೇಳಿದೆ ಎಂದು ಸಂತ್ರಸ್ತೆ ಬಾಲಕಿ ಹೇಳಿದ್ದಾಳೆ. ಸದ್ಯ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೋ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.