ದಕ್ಷಿಣಕನ್ನಡ : ಧರ್ಮಸ್ಥಳದಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಪಲ್ಟಿಯಾಗಿರುವ ಪರಿಣಾಮ 13 ಪ್ರಯಾಣಿಕರು ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ಹೌದು ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪಲ್ಟಿಯಾಗಿದ್ದು 13 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಳ ತಾಲೂಕಿನ ವಗ್ಗ ಸಮೀಪ ಈ ಒಂದು ಅಪಘಾತ ನಡೆದಿದೆ.
ಕಸ್ತೂರಿ, ಹೇಮಲತಾ, ವಿಶ್ವ, ಶಿಲ್ಪ, ಸ್ವಾತಿ, ತನುಶ್ರಿಗೆ, ಪವನ್,ನಿಕಿತಾ, ಸುಧಾಮ, ಹೇಮಾವತಿ, ರಾಜಶ್ರೀ,ಶೋಭಾ ಶೆಟ್ಟಿ ಎನ್ನುವವರಿಗೆ ಗಂಭೀರ ಗಾಯವಾಗಿದ್ದು ಎಲ್ಲರಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಧರ್ಮಸ್ಥಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಸ್ ಪಲ್ಟಿಯಾಗಿದೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.