ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಈ ಬಾರಿ ಎಂಟು ದಿನಗಳ ಕಾಲ ಯುವ ಸಂಭ್ರಮ ಆಯೋಜನೆಗೆ ತೀರ್ಮಾನಿಸಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹಾದೇವಪ್ಪ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮಾನಸಗಂಗೋತ್ರಿಯ ಬಯಲು ರಂಗಂಮದಿರದಲ್ಲಿ ಈ ಬಾರಿ ಎಂಟು ದಿನಗಳ ಕಾಲ ಯುವ ಸಂಭ್ರಮ ಅನಾವರಣಗೊಳಿಸಲಾಗುತ್ತಿದೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ನಡೆಯುವ ಯುವ ಸಂಭ್ರಮ ನಡೆಯಲಿದೆ ಎಂದರು.
ಸೆಪ್ಟೆಂಬರ್ 24 ರಂದು ಸ್ಯಾಂಡಲ್ ಹುಡ್ ನ ಖ್ಯಾತ ನಟ ನಟಿಯರಾದ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್ ಯುವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಯುವ ಸಂಭ್ರಮದಲ್ಲಿ ಭಾಗಿಯಾಗಲು 470 ಕಾಲೇಜುಗಳ ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಈ ಮೊದಲು ಏಳು ದಿನಗಳ ಕಾಲ ಯುವ ಸಂಭ್ರಮ ಆಯೋಜಿಸಲು ಚಿಂತಿಸಲಾಗಿತ್ತು. 7 ದಿನಗಳ ಕಾಲ ನಡೆದರೆ 350 ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಲಿದೆ. ಹಾಗಾಗಿ ಎಲ್ಲಾ ಕಾಲೇಜುಗಳಿಗೂ ಅವಕಾಶ ಸಿಗಲೆಂದು ಒಂದು ದಿನ ವಿಸ್ತರಣೆ ಮಾಡಿ, ಎಂಟು ದಿನಗಳ ಯುವ ಸಂಭ್ರಮ ಆಯೋಜನೆ ಮಾಡಲಾಗಿದೆ ಎಂಬುದಾಗಿ ಸಚಿವ ಮಹಾದೇವಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೈಸೂರು ದಸರಾ ಮಹೋತ್ಸವ: ಸೆ.26ರಿಂದ ಆನ್ ಲೈನ್ ಮೂಲಕ ‘ಟಿಕೆಟ್ ಮಾರಾಟ’ ಆರಂಭ, ಹೀಗಿದೆ ದರ ಪಟ್ಟಿ
BREAKING : ಮಹಾಲಕ್ಷ್ಮಿ ಹಂತಕ ಬೆಂಗಳೂರಲ್ಲೇ ವಾಸವಿದ್ದ, ಶೀಘ್ರದಲ್ಲಿ ಬಂಧಿಸಲಾಗುತ್ತೆ : ಕಮಿಷನರ್ ಬಿ.ದಯಾನಂದ್