ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿಮೀರಿದೆ. ಪೊಲೀಸರು ಎಷ್ಟೇ ಕಠಿಣವಾದ ಅಂತಹ ಕ್ರಮ ಕೈಗೊಂಡರು ಸಹ ಇಂತಹ ಪುಂಡರು ಆಗಾಗ ಬಾಲ ಬಿಚ್ಚುತ್ತಿರುತ್ತಾರೆ. ಇದೀಗ ಮೂರು ಬೈಕ್ ಗಳಿಗೆ ಪೆಟ್ರೋಲ್ ಹಾಕಿ ಸುಟ್ಟು ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಎಚ್ ಎಮ್ ಟಿ ಲೇಔಟ್ ನಲ್ಲಿ ನಡೆದಿದೆ.
ಹೌದು ಬೆಂಗಳೂರು ನಗರದಲ್ಲಿ ಪುಂಡರ ಹಾವಳಿ ಮತ್ತೆ ಮುಂದುವರೆದಿದ್ದು, ಯಾರು ಇಲ್ಲದ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾರೆ. ಉತ್ತರ ಭಾರತದ ವಿದ್ಯಾರ್ಥಿಗಳ ಬೈಕ್ ಗಳೇ ಈ ಒಂದು ಪುಂಡರಿಗೆ ಮೇನ್ ಟಾರ್ಗೆಟ್ ಆಗಿವೆ.ಬೆಂಗಳೂರಿನ ಎಚ್ ಎಮ್ ಟಿ ಲೇಔಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಕಿಡಿಗೇಡಿಗಳು ಬುಲೆಟ್ ಬೈಕ್ ನಿಂದ ಪೆಟ್ರೋಲ್ ಕದ್ದು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬುಲೆಟ್ ಬೈಕ್ ಸೇರಿದಂತೆ ಮೂರು ವಾಹನಗಳಿಗೆ ಬೆಂಕಿ ಹಚ್ಚಿ ಪುಂಡರು ಪರಾರಿಯಾಗಿದ್ದಾರೆ. ಸೆಪ್ಟೆಂಬರ್ 18ರಂದು ತಡರಾತ್ರಿ ನಡೆದಿದ್ದ ಘಟನೆ ತಡವಾಗಿ ಬಳಕೆಗೆ ಬಂದಿದೆ. ಕಿಡಿಗೇಡಿಗಳು ಬೈಕ್ ಗಳಿಗೆ ಬೆಂಕಿ ಹಚ್ಚುತ್ತಿರುವ ಕೃತ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.