ಬೆಂಗಳೂರು : ಬೆಂಗಳೂರಿನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ದೆಹಲಿಯ ಶ್ರದ್ಧಾ ವಾಕರ್ ಮಾದರಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಶಿವಾಜಿನಗರದಲ್ ಇರುವ ಬೌರಿಂಗ್ ಆಸ್ಪತ್ರೆಯಲ್ಲಿ ಹತ್ಯೆಗೆ ಒಳಗಾದ ಮಹಾಲಕ್ಷ್ಮಿಯ ಮರಣೋತ್ತರ ಪರೀಕ್ಷೆ ಅಂತ್ಯವಾಗಿದೆ.
ಹೌದು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮಹಾಲಕ್ಷ್ಮಿ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು, ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಮಹಾಲಕ್ಷ್ಮಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದೀಗ ಮರಣೋತ್ತರ ಪರೀಕ್ಷೆ ಅಂತ್ಯವಾದ ಬಳಿಕ ದೇಹದ ಪೀಸ್ ಗಳನ್ನು ಕುಟುಂಬಸ್ಥರಿಗೆ ಆಸ್ಪತ್ರೆಯ ವೈದ್ಯರು ಹಸ್ತಾಂತರಿಸಿದ್ದಾರೆ.
ಸದ್ಯ ದೇಹದ ಪೀಸ್ ಗಳನ್ನು ಕುಟುಂಬಸ್ಥರು ಚಿತಾಗಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ಲಾಲ್ ಬಾಗಿನ ಚಿತಾಗಾರದಲ್ಲಿ ಮಹಾಲಕ್ಷ್ಮಿಯ ಅಂತ್ಯ ಸಂಸ್ಕಾರವು ಕುಟುಂಬಸ್ಥರಿಂದಲೇ ನೆರವೇರಲಿದೆ ಎಂದು ಬಲಮೂಲಗಳಿಂದ ತಿಳಿದುಬಂದಿದೆ.