ಬೀದರ್ : ಇತ್ತೀಚಿಗೆ ಅನೈತಿಕ ಸಂಬಂಧಗಳಿಂದ ಅದೆಷ್ಟೋ ಸಂಸಾರಗಳು ನುಚ್ಚುನೂರಾಗುತ್ತಿವೆ, ಅಲ್ಲದೆ ಎಷ್ಟೋ ಪ್ರಕರಣಗಳಲ್ಲಿ ಜೀವಗಳು ಹೋಗಿವೆ. ಇದೀಗ ಬೀದರ್ ನಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ಹೆಂಡತಿಯೊಂದಿಗೆ ಯುವಕ ಏಕಾಂತದಲ್ಲಿ ಇದ್ದದ್ದನ್ನು ನೋಡಿ ರೊಚ್ಚಿಗೆದ್ದ ಪತಿ ಯುವಕನ ಮರ್ಮಾಂಗವನ್ನೇ ಕಟ್ ಮಾಡಿರುವ ಘಟನೆ ನಡೆದಿದೆ.
ಹೌದು ವ್ಯಕ್ತಿಯಿಂದ ಹಲ್ಲೆಗೆ ಒಳಗಾದ ಯುವಕನನ್ನು ಸುನಿಲ್ ಎಂದು ಗುರುತಿಸಲಾಗಿದ್ದು, ನಿನ್ನೆ ರಾತ್ರಿ ಆಂಟಿ ನೋಡಲು ಮನೆ ಬಳಿ ತೆರಳಿದ್ದಾಗ ಸುನಿಲ್ ಲಾಕ್ ಆಗಿದ್ದ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ ಪತಿ, ಆತನ ಮರ್ಮಾಂಗವನ್ನೇ ಕಟ್ ಮಾಡಿ, ಯುವಕನ ಅನೈತಿಕ ಸಂಬಂಧಕ್ಕೆ ಅಂತ್ಯ ಹಾಡಿದ್ದಾನೆ.
ಈ ವೇಳೆ ತಕ್ಷಣ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಯುವಕನ ಮರ್ಮಾಂಗವನ್ನು ಕಟ್ ಮಾಡಿದಂತಹ ಮಹಿಳೆ ಪತಿ ವಿರುದ್ದ ಮುನ್ನಾಏಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಆರೆಸ್ಟ್ ಮಾಡಲಾಗಿದೆ.