ಉತ್ತರಕನ್ನಡ : ಕಳೆದ ಎರಡು ದಿನಗಳ ಹಿಂದೆ ತುಮಕೂರಿನಲ್ಲಿ ಮಕ್ಕಳಿಬ್ಬರು ತಮ್ಮ ತಂದೆಯ ಶವವನ್ನು ಬೈಕ್ ಮೇಲೆ ಕೂರಿಸಿಕೊಂಡು ತೆರಳಿದ್ದ ಘಟನೆ ಮಾಸುವ ಮುನ್ನವೇ, ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ರಸ್ತೆ ಸರಿ ಇಲ್ಲವೆಂದು ಶವವನ್ನು ಕಟ್ಟಿಗೆಗೆ ಕಟ್ಟಿ ಮೃತದೇಹ ಸಾಗಿಸಿರುವ ಘಟನೆ ಕಾರವಾರದ ಗುಡ್ಡಹಳ್ಳಿಯಲ್ಲಿ ನಡೆದಿದೆ.
ಹೌದು ರಾಮಾ ಮುನ್ನಾಗೌಡ ಎನ್ನುವವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ಕಾರವಾರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ತಡರಾತ್ರಿ 12 ಗಂಟೆಗೆ ಏಕಾಏಕಿ ಹೃದಯಾಘಾತ ಸಂಭವಿಸಿ ರಾಮಾ ಮುನ್ನಾಗೌಡ ಅವರು ಮೃತಪಟ್ಟಿದ್ದರು. ಸದ್ಯ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನು ರವಾನಿಸಲು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಜನರೆಲ್ಲ ಸೇರಿ ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಿದ್ದಾರೆ.
ಇನ್ನು ಮೃತ ರಾಮಾ ಮುನ್ನಾಗೌಡ ಎನ್ನುವವರ ಮನೆ ಗುಡ್ಡದ ಮೇಲೆ ಇರುವುದರಿಂದ, ಶವವನ್ನು ಕಟ್ಟಿಗೆಗೆ ಕಟ್ಟಿ ಕಟ್ಟಿಗೆ ಮೂಲಕ ಸಾಗಾಟ ಮಾಡಿರುವ ಮನಕಲಕುವ ಘಟನೆ ನಡೆದಿದೆ. ಆದ್ದರಿಂದ ಕೊಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಇಂತಹ ಘಟನೆ ಮರುಕಳಿಸದಂತೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಮಕ್ಕಳಿಬ್ಬರು ಬೈಕ್ ಮೇಲೆ ನಮ್ಮ ತಂದೆಯ ಶವ ಸಾಗಾಟ ಮಾಡಿರುವ ದೃಶ್ಯ ನೋಡಿದವರ ಕರುಳು ಚುರುಕ್ ಎನಿಸುವಂತಿತ್ತು.ಸದ್ಯ ಈ ಒಂದು ಘಟನೆಗೆ ಕಾರಣ ಕೇಳಿ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.