ಶಿವಮೊಗ್ಗ : ಈಗಾಗಲೇ ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ದಾವಣಗೆರೆಯಲ್ಲಿ ಕೋಮು ಗಲಭೆ ಪ್ರಕರಣ ನಡೆದಿದ್ದು, ಹೀಗಾಗಿ ನಾಳೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದರು.
ಹೌದು ನಾಳೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ. ನಾಳೆ ಭದ್ರತೆಗೆ 25 ಡಿವೈಎಸ್ಪಿ, 60 ಇನ್ಸ್ಪೆಕ್ಟರ್, 110 ಪಿಎಸ್ಐ ಗಳು, ಭದ್ರತೆಗೆ ನಿಯೋಜನೆ ಮಾಡಿದ್ದೇವೆ. ಪೊಲೀಸ್ ಹಾಗೂ ಹೋಂ ಗಾರ್ಡ್ಸ್ ಗಳು ಸೇರಿದಂತೆ 3500 ಪೊಲೀಸ್ ಸಿಬ್ಬಂದಿ, 8 ಕೆ ಎಸ್ ಆರ್ ಪಿ ತುಕಡಿ, 1 ಆರ್.ಎ. ಎಫ್.ತುಕಡಿ, ನಿಯೋಜನೆ ಮಾಡಲಾಗಿದೆ.
ಶಾಂತಿಭಂಗ ಮಾಡುವವರನ್ನು ಗುರುತಿಸಿ ಎಂದು ಸೂಚನೆ ನೀಡಲಾಗಿದೆ ಶಾಂತ ರೀತಿಯಲ್ಲಿ ಮೆರವಣಿಗೆ ನಡೆಯಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಇಡೀ ನಗರದಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ.