ಆಂಧ್ರಪ್ರದೇಶ : ತಿರುಪತಿ ಲಡ್ಡು ವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್ ಶ್ಯಾಮಲಾ ರಾವ್ ಅವರು ಹೌದು ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವುದು ನಿಜ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್ ಶಾಮಲಾ ರಾವ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಿ ಲ್ಯಾಬ್ ಗಳಲ್ಲಿ ನಾವು ಪರೀಕ್ಷೆ ಮಾಡಿದ್ದೆವು. ಆದರೆ ವರದಿ ನೋಡಿ ನಮಗೆ ಆಘಾತ ಉಂಟಾಯಿತು. ದನದ ಕೊಬ್ಬು, ಮೀನಿನ ಎಣ್ಣೆ ನೋಡಿ ಶಾಕ್ ಆಯ್ತು. ಅದರ ಜೊತೆಗೆ ಹಂದಿಯ ಮಾಂಸ, ಪಾಮ್ ಆಯಿಲ್, ಬೀಫ್ ಟಾಲ್ಲೋ, ಫಿಶ್ ಆಯಿಲ್, ಸೂರ್ಯಕಾಂತಿ ಎಣ್ಣೆ ಇತ್ತು.
ಹಿಂದಿನ ಸರ್ಕಾರ ತೂಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು. ಲಡ್ಡುಗೆ ಪೂರೈಕೆ ಆದ ತುಪ್ಪ ಅತ್ಯಂತ ಕಲಬೆರಿಕೆ ಆಗಿತ್ತು. ಅತ್ಯಂತ ಕಳಪೆ ಮಟ್ಟದ ತುಪ್ಪವನ್ನು ಕಂಪನಿ ಪೂರೈಸಿತ್ತು ಎಂದು ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್ ಶ್ಯಾಮಲಾ ಅವರು ಸ್ಪೋಟಕವಾದ ಮಾಹಿತಿ ನೀಡಿದ್ದಾರೆ.