ಮೈಸೂರು : ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮುನಿರತ್ನ ವಿರುದ್ಧ ಎಸ್‌ಐಟಿ ತನಿಖೆ ಮಾಡಲು ಸಚಿವರು, ಶಾಸಕರು ಪತ್ರ ಕೊಟ್ಟಿದ್ದಾರೆ. ಮುನಿರತ್ನ ವಿರುದ್ದ ಬಹಳಷ್ಟು ಗಂಭೀರ ಪ್ರಕರಣಗಳು ಇವೆ. ಹೀಗಾಗಿ ವಿಶೇಷ ತನಿಖಾ ತಂಡದ(SIT) ಅಗತ್ಯವಿದೆ ಎಂದಿದ್ದಾರೆ. ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವಂತೆ ಗೃಹಸಚಿವರಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶ ಮೂರ್ತಿ ವಿಚಾರವಾಗಿ ರಾಜ್ಯದಲ್ಲಿ ಪ್ರತಿನಿತ್ಯ ಏನು ಗಲಾಟೆ ನಡೆಯುತ್ತಿಲ್ಲ. ಇದುವರೆಗೆ ಎರಡು ಪ್ರಕರಣಗಳು ನಡೆದಿವೆ. ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.ನಾಗಮಂಗಲ ಘಟನೆ ತಡೆಯುವಲ್ಲಿ ಪೊಲೀಸರು ವೈಫಲ್ಯ ಹಿನ್ನೆಲೆ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ. ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಎರಡು ಘಟನೆಗಳ ಹೊರತು ಎಲ್ಲ ಶಾಂತಿಯುತವಾಗಿ ನಡೆದಿದೆ.
ಡಿನೋಟಿಫಿಕೇಷನ್ ಸಂಬಂಧ ದಾಖಲೆಗಳನ್ನ ನಿನ್ನೆ ಸಚಿವರು ಬಿಡುಗಡೆ ಮಾಡಿದ್ದಾರೆ. ನಾನು ಆ ದಾಖಲೆಗಳನ್ನ ನೋಡುತ್ತೇನೆ. ಆ ಭೂಮಿ ಕುಮಾರಸ್ವಾಮಿ ಭಾಮೈದನಿಗೆ ರಿಜಿಸ್ಟರ್ ಮಾಡಲಾಗಿದೆ. ಅತ್ತೆಗೆ ಹಲವಾರು ಜಿಪಿಎ ಮಾಡಿಕೊಟ್ಟಿದ್ದಾರೆ. ಇದು ಬಹಳ ಗಂಭೀರವಾದ ಪ್ರಕರಣವಾಗಿದೆ. ನೋಡೊಣಾ ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ. ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ತಮ್ಮ ಮೇಲಿನ ಎಲ್ಲಾ ಆರೋಪಗಳು ಹಿಟ್ ಅಂಡ್ ರನ್ ರೀತಿ ಮಾಡಿ ಹೋಗುತ್ತಾರೆ ಎಂದರು.