ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿನಿಂದನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಜೊತೆ ಮೊಬೈಲ್ ನಲ್ಲಿ ಮಹಿಳೆಯರ ಕುರಿತು ಅಶ್ಲೀಲವಾಗಿ ಪದ ಬಳಕೆ ಮಾಡಿದ್ದು, ಸಮಾಜಕ್ಕೆ ಧಕ್ಕೆ ತರುವಂತದ್ದು ಹಾಗಾಗಿ ಬಿಜೆಪಿ ಕೂಡಲೇ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಆಗ್ರಹಿಸಿದರು.
ಶಾಸಕ ಮುನಿರತ್ನ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಮುನಿರತ್ನ ಪದಬಳಕೆ ಸಮಾಜಕ್ಕೆ ಅಚ್ಚರಿ ತರುವಂತಹದ್ದು, ಮುನಿರತ್ನ ವಿರುದ್ಧ ಹನಿ ಟ್ರಾಪ್ ಆರೋಪ ಕೇಳಿ ಬರುತ್ತಿದೆ.ಪ್ರಜ್ವಲ್ ಪ್ರಕರಣದಂತೆ ಮುನಿರತ್ನ ಕೆಸ್ ಅಚ್ಚರಿಯಾಗಿದೆ.ಅದಕ್ಕಾಗಿ ಆದಷ್ಟು ಬೇಗ ತನಿಖೆ ಆಗಬೇಕು ಎಂದು ಶರತ್ ಬಚ್ಚೇಗೌಡ ಆಗ್ರಹಿಸಿದರು.
ತನಿಖೆ ಮಾಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಸಹ ಆಶ್ವಾಸನೆ ಕೊಟ್ಟಿದ್ದಾರೆ.ಎಸ್ ಐ ಟಿ ತನಿಖೆಗೆ ಕೊಡಬೇಕಾ ಅಥವಾ ಸಿಐಡಿ ಗೆ ಕೊಡಬೇಕಾ ಎಂದು ತಂಡ ರಸಿಸಿ ತೀರ್ಮಾನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ ಕೂಡ ಈ ಒಂದು ಘಟನೆ ಖಂಡಿಸಿದ್ದಾರೆ.
ಮುನಿರತ್ನ ಅವರನ್ನು ಬಿಜೆಪಿ ಮೊದಲು ಉಚ್ಚಾಟನೆ ಮಾಡಬೇಕು. ಶಾಸಕ ಸ್ಥಾನಕ್ಕೂ ಮುನಿರತ್ನ ಅವರಿಂದ ರಾಜೀನಾಮೆ ಕೊಡಿಸಬೇಕು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ತೀವ್ರವದ ವಾಗ್ದಾಳಿ ನಡೆಸಿದರು.