ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ (CMC & TMC) ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯವಾಗಿದ್ದು, ಸೆಪ್ಟೆಂಬರ್ 9 ರಿಂದ ನೋಂದಣಿ ಪ್ರಾರಂಭಗಿದ್ದು, ಹಕ್ಕು ವರ್ಗಾವಣೆಗೆ ಕಾವೇರಿ -2 ತಂತ್ರಾಂಶ ಸಂಯೋಜನೆ ಮಾಡಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ನೊಂದಣಿಗೆ ಸಂಬAಧಿಸಿದAತೆ ಇದೇ ಸೆ.9 ರಿಂದ ಜಾರಿಗೆ ಬರುವಂತೆ ಇ-ಆಸ್ತಿ ದಾಖಲೆ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಆದ್ದರಿಂದ ಸಾರ್ವಜನಿಕರು ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ನೊಂದಣಿಗಾಗಿ ಇ-ಆಸ್ತಿ ಸಲ್ಲಿಸುವುದು ಕಡ್ಡಾಯವಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇ-ಆಸ್ತಿ ತಂತ್ರಾಂಶದ ಮಾಹಿತಿ ಹೊರತು,ಬೇರೆ ಯಾವುದೇ ವಿಧಾನದಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಿದ್ದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ತಮ್ಮ ಸ್ವತ್ತಿಗೆ ಇ-ಆಸ್ತಿ ಖಾತಾ (PID No.) ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ನೋಂದಣಿ ವೇಳೆ ಸ್ವತ್ತಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಇ-ಆಸ್ತಿ ತಂತ್ರಾಂಶದಿಂದ ಮಾತ್ರ ಪಡೆದುಕೊಳ್ಳಲಾಗುವುದು, ಭೌತಿಕ ಖಾತಾ (Physical Khata) ನೋಂದಣಿಗೆ ಪರಿಗಣಿಸಲಾಗುವುದಿಲ್ಲ.
ನಗರ ಸ್ಥಳೀಯ ಸಂಸ್ಥೆ (ಸಿಎಂಸಿ, ಟಿಎಂಸಿ) ಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯ.
ತಂತ್ರಾಂಶಗಳ ಸಂಯೋಜನಾ ವಿಧಾನ ಹೊರತುಪಡಿಸಿ, ಬೇರೆ ಯಾವುದೇ ವಿಧಾನದಿಂದ ನೋಂದಣಿ ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು.