ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ಗಂಗಾವತಿ ಸಮುದಾಯ ರೇಡಿಯೋ ಗ್ರಾಮೀಣ ಭಾರತಿ 90.4 ಎಫ್ಎಮ್ನ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ ರೇಡಿಯೋ ಪಾಠಗಳ ಪ್ರಸಾರ ಕಾರ್ಯಕ್ರಮವು ಸೆಪ್ಟೆಂಬರ್ 18ರಿಂದ ಆರಂಭವಾಗಿದೆ ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಿಂದ ಪ್ರತಿದಿನ ಮಧ್ಯಾಹ್ನ 3:30 ರಿಂದ 4:30 ರವರೆಗೆ ಗಂಗಾವತಿಯ 90.4 ಎಫ್ಎಂ ಗ್ರಾಮೀಣ ಭಾರತಿ ರೇಡಿಯೋದಲ್ಲಿ ಎಸ್ ಎಸ್ ಎಲ್ ಸಿ ಪಾಠಗಳು ಪ್ರಸಾರವಾಗಲಿವೆ. ವಿದ್ಯಾರ್ಥಿಗಳು ರೇಡಿಯೋ ಕೇಳಲು 90.4 ಎಂಹೆಚ್ಜೆಡ್ ಟ್ಯೂನ್ ಮಾಡಿಕೊಳ್ಳಿ. ರೇಡಿಯೋ ಪಾಠಗಳ ಪ್ರಸಾರದ ಅವಧಿಯಲ್ಲಿ ವಿಷಯ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠಗಳನ್ನು ಕೇಳಿಸಲು ಮತ್ತು ಮಕ್ಕಳು ಸಂದೇಹಗಳನ್ನು ಸಂಪನ್ಮೂಲ ಶಿಕ್ಷಕರಲ್ಲಿ ಫೋನ್ ಇನ್ ಮೂಲಕ ಕೇಳಿ ಪರಿಹರಿಸಿಕೊಳ್ಳಲು ಸಹಕರಿಸಬೇಕು.
ರೇಡಿಯೋ ಪಾಠಗಳಲ್ಲಿ ಗಂಗಾವತಿಯ ಸಂಪನ್ಮೂಲ ಶಿಕ್ಷಕರುಗಳು ಭಾಗವಹಿಸಲಿದ್ದು, ಗಂಗಾವತಿ ಮತ್ತು ಜಿಲ್ಲೆಯ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.