ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಸೆಲ್ಗೆ ಟಿವಿ ಸೌಲಭ್ಯ ನೀಡಲಾಗಿದೆ. ಟಿವಿಯಲ್ಲಿ ಕೇವಲ ಒಂದೇ ಒಂದು ಚಾನೆಲ್ ಬರಲಿದೆ. ಇನ್ನು ಖಾಸಗಿ ಚಾನೆಲ್ ನೋಡುವ ಮೂಲಕ ತನ್ನ ಸುದ್ದಿಗಳನ್ನು ತಿಳಿದುಕೊಳ್ಳಬೇಕು ಎಂಬ ನಟನ ಉದ್ದೇಶಕ್ಕೆ ನಿರಾಸೆಯಾಗಿದೆ.
ಹೌದು ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪಗೆ ಟಿವಿ ನೋಡುವ ಸೌಲಭ್ಯ ಸಿಕ್ಕಿದೆ. ಹಲವು ದಿನಗಳ ಬೇಡಿಕೆಯ ಬಳಿಕ ಬಳ್ಳಾರಿ ಜೈಲನಲ್ಲಿ ನಟನ ಸೆಲ್ಗೆ ಟಿವಿ ಅಳವಡಿಕೆ ಕಾರ್ಯವು ಯಶಸ್ವಿಯಾಗಿದ್ದು, ಇದರೊಂದಿಗೆ ಮೊದಲ ಬೇಡಿಕೆ ಈಡೇರಿದಂತಾಗಿದೆ. ಆದರೆ ಇನ್ನು ನೀಡಲಾಗಿರುವ ಟಿವಿಯಲ್ಲಿ ಕೇವಲ ದೂರದರ್ಶನ ಚಾನೆಟ್ ಒಂದೇ ಲಭ್ಯವಾಗಲಿದೆ. ಯಾವುದೇ ಖಾಸಗಿ ಚಾನೆಲ್ಗಳ ವೀಕ್ಷಣೆಗೆ ಅವಕಾಶ ನೀಡಿಲ್ಲ.
ಟಿವಿ ಬಳಿಕ ದಿಂಬು, ಕುರ್ಚಿ ಬೇಕಂತೆ!
ದರ್ಶನ್ಗೆ ಜೈಲಿನಲ್ಲಿ ಬೆನ್ನು ನೋವು ಕಾರಣ ನೀಡಿ ಕೋರ್ಟ್ ನಲ್ಲಿ ಮನವಿ ಮಾಡಿ, ಕುರ್ಚಿಗೆ ಮನವಿ ಮಾಡಿದ್ದರು ಇದಕ್ಕೆ ಕೋರ್ಟ್ ಕೂಡ ಒಪ್ಪಿಕೊಂಡಿತ್ತು ಅದಾದ ಬಳಿಕ ಟಿವಿ ಬೇಡಿಕೆಟ್ಟಿದರು ಅದಕ್ಕೂ ಸಹ ಕೋರ್ಟ್ ಒಪ್ಪಿಗೆ ನೀಡಿತ್ತು ಆದರೆ ಬಳ್ಳಾರಿಯಲ್ಲಿ ಟಿವಿ ರಿಪೇರಿ ಗೆ ಬಂದಾಗ 10 ದಿನಗಳ ಕಾಲ ನಂತರ ಇದೀಗ ಮತ್ತೆ ದರ್ಶನ್ಗೆ ಟಿವಿ ನೋಡುವ ಭಾಗ್ಯ ದೊರೆತಿದೆ.
ಇದೀಗ ದರ್ಶನ್ ಮತ್ತೊಂದು ಹೊಸ ಬೇಡಿಕೆ ಇಟ್ಟಿದ್ದು, ಸೆಲ್ನಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ಮೆತ್ತನೆಯ ತಲೆ ದಿಂಬು ನೀಡುವಂತೆ ಜೈಲು ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೊರೆ ಹೋಗಿದ್ದರು. ಸದ್ಯ ನ್ಯಾಯಾಲಯವು ಕುರ್ಚಿ ನೀಡಲು ಒಪ್ಪಿಗೆ ನೀಡಿದೆ. ಬುಧವಾರ ಅಥವಾ ಗುರುವಾರದಲ್ಲಿ ಪ್ಲಾಸ್ಟಿಕ್ ಕುರ್ಚಿಯು ನಟನ ಸೆಲ್ಗೆ ಸೆರಲಿದೆ.