ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ, ತಿಣುಕಾಡಿ ಮತ್ತೆ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 5 ವರ್ಷ ಪೂರೈಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕವಾದ ಭವಿಷ್ಯ ನುಡಿದರು.
ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ, ಮಾತನಾಡಿದ ಅವರು ಸೆಪ್ಟೆಂಬರ್ 16ರಂದು ಏಕನಾಥ ಶಿಂಧೆ ಬಣದ ಶಿವಸೇನೆಯವರು ಹೇಳಿದ್ದಾರೆ. ರಾಹುಲ್ ನಾಲಿಗೆ ಕತ್ತರಿಸಿದರೆ 11 ಲಕ್ಷ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಶಿವ ಸೇನೆ ನಾಯಕ ಸಂಜಯ್ ಗಾಯಕ್ವಾಡ್ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿ ಸಂಜಯ್ ನನ್ನು ಬಂಧಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಅಲ್ಲದೆ ಯುಪಿ ಸಚಿವ ರಘುರಾಜ್ ಸಿಂಗ್ ಸಹ ಒಂದು ಹೇಳಿಕೆ ಕೊಟ್ಟಿದ್ದರು.ರಾಹುಲ್ ಗಾಂಧಿ ದೇಶದ ನಂಬರ್ ಒನ್ ಉಗ್ರ ಅಂತ ಹೇಳಿಕೆ ಕೊಟ್ಟಿದ್ದಾರೆ. ಸೆಪ್ಟೆಂಬರ್ 16ರಂದು ಯುಪಿ ಸಚಿವ ರಘುರಾಜ್ ಸಿಂಗ್ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ನೇರವಾಗಿ ರಾಹುಲ್ ಗಾಂಧಿ ಹೀಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆದರೂ ಬಿಜೆಪಿ ಹಾಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯವರು ಗದಾ ಪ್ರಹಾರ ನಡೆಸುತ್ತಿದ್ದಾರೆ. ಟೀಕೆ ಆರೋಪಗಳ ಜೊತೆಗೆ ಕೊಲೆ ಬೆದರಿಕೆ ಸಹ ಹಾಕುತ್ತಿದ್ದಾರೆ. ಆರೋಪ, ಗೊಡ್ಡು ಬೆದರಿಕೆಗಳಿಗೆ ರಾಹುಲ್ ಗಾಂಧಿ ಹೆದರುವುದಿಲ್ಲ. ರಾಹುಲ್ ಗಾಂಧಿಯ ಜನಪ್ರಿಯತೆಯನ್ನು ಕುಗ್ಗಿಸಲು ಟೀಕೆ ಬೆದರಿಕೆ ಹಾಕುತ್ತಿದ್ದಾರೆ. ರಾಹುಲ್ ಗಾಂಧಿ ಇಂದಿರಾಗಾಂಧಿಯವರ ಕುಟುಂಬದಿಂದ ಬಂದವರು. ರಾಹುಲ್ ಗಾಂಧಿ ತಂದೆಯವರು ಬಾಂಬ್ ಸ್ಫೋಟದಲ್ಲಿ ಮೃತರಾದರು. ದೇಶಕ್ಕೋಸ್ಕರ ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದರು ಎಂದು ತಿಳಿಸಿದರು.
ಬಿಜೆಪಿಯವರು ನೇರವಾಗಿ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ದಾರೆ. ನೀವು ಸರಿಯಾಗಿ ನಡೆದುಕೊಳ್ಳದೆ ಹೋದರೆ ನಿಮಗೂ ಅದೇ ಗತಿ ಆಗುತ್ತೆ. ಇಂದಿರಾಗಾಂಧಿಗೆ ಆದ ಗತಿಯೇ ನಿಮಗೂ ಆಗುತ್ತೆ ಅಂತ ಹೇಳಿದ್ದಾರೆ. ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಉಗ್ರ ಅಂತ ಕರೆದಿದ್ದಾರೆ. ರಾಹುಲ್ ಗಾಂಧಿಗೆ ಭಯೋತ್ಪಾದಕ ಅಂತ ರವನೀತ್ ಕರೆದಿದ್ದಾರೆ. ಜನಸಾಮಾನ್ಯರು ಮತ್ತು ಕಾರ್ಯಕರ್ತರನ್ನು ಎತ್ತಿ ಕಟ್ಟುತ್ತಿದ್ದಾರೆ. ರಾಹುಲ್ ಗಾಂಧಿ ಯುದ್ಧ ಕಾರ್ಯಕರ್ತರನ್ನು ಬಿಜೆಪಿ ಎತ್ತಿಕಟ್ಟುತ್ತಿದೆ ಎಂದು ವಾಗ್ದಾಳಿ ನಡೆಸಿದರು.