ವಿಜಯನಗರ : ಇತ್ತೀಚಿಗೆ ಬೀದಿ ನಾಯಿಗಳ ಕಾಟ ಹಾಗೂ ಹುಚ್ಚು ನಾಯಿಗಳ ದಾಳಿಯಿಂದ ತಮ್ಮ ಮಕ್ಕಳನ್ನು ರಕ್ಷಿಸುವುದೇ ಪೋಷಕರಿಗೆ ದೊಡ್ಡ ತಲೆ ನೋವಾಗಿದೆ. ಇದೀಗ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಾಲ್ವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ಮಾಡಿ ಕಚ್ಚಿ ಗಾಯಗೋಳಿಸಿರುವ ಘಟನೆ ನಡೆದಿದೆ.
ಹೌದು ಹೊಸಪೇಟೆಯಲ್ಲಿ ನಾಲ್ವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಏಕಾಏಕಿ ದಾಳಿ ಮಾಡಿದ್ದರಿಂದ ಮಕ್ಕಳಿಗೆ ಗಂಭೀರವಾದ ಗಾಯಗಳಾಗಿದ್ದು, ಅದರಲ್ಲಿ 3 ವರ್ಷದ ಜನನಿ ಎಂಬ ಮಗುವಿಗೆ ಮುಖ, ಗಂಟಲಿಗೆ ಕಚ್ಚಿ ನಾಯಿ ಗಾಯಗೊಳಿಸಿದೆ.