Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸಿದ್ದರಾಮಯ್ಯ ರಾಜೀನಾಮೆಗೆ ಬಿಗ್ ಟ್ವಿಸ್ಟ್ : ರಾಜೀನಾಮೆ ಸಲ್ಲಿಸದೆ ವಾಪಸಾದ ಸಿಎಂ!

BREAKING : ರಾಜ್ಯಪಾಲರ ಕಾರ್ಯದರ್ಶಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah resigns

ಕರ್ನಾಟಕದ ದೀರ್ಘಾವಧಿ ಸಿಎಂ, ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆ : ಸಿಎಂ ಸಿದ್ದರಾಮರ 5 ದಶಕಗಳ ರಾಜಕೀಯ ಪಯಣ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ?: MLC ರವಿಕುಮಾರ್ ಪ್ರಶ್ನೆ
KARNATAKA

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ?: MLC ರವಿಕುಮಾರ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯ ಸರಕಾರವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‍ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸುತ್ತಿದೆ ಎಂದು ಪ್ರಸ್ತಾಪಿಸಿದರು. ಕರ್ನಾಟಕದಲ್ಲಿ ಸಂವಿಧಾನವನ್ನು ಜಾರಿ ಮಾಡುತ್ತಿದ್ದೀರಾ? ಎಂದು ಕೇಳಿದರು.

ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಸಂವಿಧಾನ ಯಥಾವತ್ ಜಾರಿಗೊಳಿಸುವ ಸರಕಾರ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಅಟ್ರಾಸಿಟಿ ಕೇಸ್ ಆಗಿದ್ದು, ಬಂಧಿಸಿದ್ದೀರ ಒ.ಕೆ. ಆದರೆ, ಒಂದು ತಿಂಗಳಿಗೂ ಹಿಂದೆ ಇದೇ ಅಟ್ರಾಸಿಟಿ ಕೇಸ್ ಕಾಂಗ್ರೆಸ್ಸಿನ ಶಾಸಕ ಚನ್ನಾರೆಡ್ಡಿ ಮೇಲೂ ಆಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಭಾಗವಹಿಸುವ ಅವರನ್ನು ಇನ್ನೂ ಬಂಧಿಸಿಲ್ಲ. ಇದಾ ನಿಮ್ಮ ಪ್ರಜಾಪ್ರಭುತ್ವ? ಇದಾ ನಿಮ್ಮ ಸೆಕ್ಯುಲರಿಸಂ, ಇದಾ ನಿಮ್ಮ ಸಂವಿಧಾನ ಮಾನ್ಯ ಸಿದ್ದರಾಮಯ್ಯನವರೇ ಎಂದು ಕೇಳಿದರು.

ನಾಗಮಂಗಲದಲ್ಲಿ ಗಣಪತಿ ಹಬ್ಬ ಮಾಡುವ, ಮೆರವಣಿಗೆ ಹೋಗುವ ಹಿಂದೂ ಯುವಕರ ಮೇಲೆ ನೂರಾರು ಕಲ್ಲು ಎಸೆದುದಲ್ಲದೆ, ಗಣಪತಿ ಮೂರ್ತಿ ಮೇಲೆ ಚಪ್ಪಲಿ ಎಸೆದಿದ್ದಾರೆ. ಹಿಂದೂಗಳ ಮೇಲೆ ಲಾಠಿಚಾರ್ಜ್, ಕಲ್ಲೆಸೆತ ಆಗಿದೆ. ಹಿಂದೂಗಳ ಹತ್ತಾರು ಅಂಗಡಿ ಸುಟ್ಟಿದ್ದಾರೆ. ಆದರೆ, ಹಿಂದೂಗಳ ಮೇಲೇ ಪ್ರಮುಖ ಆರೋಪಿಗಳನ್ನಾಗಿ ಮಾಡಿ (ಎ1, ಎ2, ಎ3 ಹೀಗೆ) ಕೇಸು ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಅಂಗಡಿ ಸುಟ್ಟವರು, ಚಪ್ಪಲಿ, ಕಲ್ಲು ಎಸೆದವರನ್ನು ಕೇಸಿನಲ್ಲಿ ಸೇರಿಸಿಲ್ಲ. ಇದು ರಾಜ್ಯದ ಪ್ರಜಾಪ್ರಭುತ್ವವೇ ಎಂದು ಕೇಳಿದರು. ಹಿಂದೂಗಳಿಗೆ ಒಂದು ರೀತಿ, ಮುಸಲ್ಮಾನರಿಗೆ ಇನ್ನೊಂದು ನೀತಿ- ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಟೀಕಿಸಿದರು.

ಇವತ್ತು ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದು, ಸಚಿವ ಮಹದೇವಪ್ಪ ಅವರು ಭಾಷಣ ಮಾಡುತ್ತಿದ್ದರು. ಒಬ್ಬ ಯುವಕ ಕಾಂಪೌಂಡ್ ಜಿಗಿದು ವಿವಿಐಪಿ ಗ್ಯಾಲರಿ ದಾಟಿ ವೇದಿಕೆ ಏರುತ್ತಿದ್ದಾನೆ. ಎಲ್ಲರೂ ಗಾಬರಿಗೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ, ಸಚಿವರು, ವಿಧಾನಸೌಧಕ್ಕೆ ಸೆಕ್ಯೂರಿಟಿ ಇಲ್ಲ. ಸಂಪೂರ್ಣ ಭದ್ರತಾ ವೈಫಲ್ಯ ಆಗಿದೆ ಎಂದು ಗಮನ ಸೆಳೆದರು. ಗೂಢಚರ ಇಲಾಖೆ, ಗೃಹ ಇಲಾಖೆ, ಪೊಲೀಸ್ ಇಲಾಖೆ ಕರ್ನಾಟಕದಲ್ಲಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಅದೇ ವಿಧಾನಸೌಧದಲ್ಲಿ ಸದನ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು. ರಾಮೇಶ್ವರಂ ಕೆಫೆ ಸ್ಪೋಟ ಸಂಭವಿಸಿದೆ. ಈ ಆರೋಪಿಗಳು ಬಿಜೆಪಿ ಕಚೇರಿಯನ್ನು ಗುರಿಯನ್ನಾಗಿ ಮಾಡಿದ್ದರು ಎಂದು ಎನ್‍ಐಎ ವರದಿ ಹೇಳಿದೆ. ಈ ಸರಕಾರವು ಕರ್ನಾಟಕ ರಾಜ್ಯದಲ್ಲಿ ಗೃಹ ಇಲಾಖೆಯನ್ನು ಸಂಪೂರ್ಣವಾಗಿ ಅಲ್ಪಸಂಖ್ಯಾತರ ಕೈಗೆ ಕೊಟ್ಟಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರು ಮೀಸಲಾತಿ ವಿರೋಧಿಸಿ ಡಾ. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಸಿದ್ದರಾಮಯ್ಯನವರು ಏನು ಹೇಳುತ್ತಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಂದಿನಿ ಹಾಲಿನ ದರ ಹೆಚ್ಚಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ: BJP ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ

BREAKING : ಎರಡು ದಿನಗಳಲ್ಲಿ `CM’ ಸ್ಥಾನಕ್ಕೆ ರಾಜೀನಾಮೆ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

Share. Facebook Twitter LinkedIn WhatsApp Email

Related Posts

BREAKING : ಸಿದ್ದರಾಮಯ್ಯ ರಾಜೀನಾಮೆಗೆ ಬಿಗ್ ಟ್ವಿಸ್ಟ್ : ರಾಜೀನಾಮೆ ಸಲ್ಲಿಸದೆ ವಾಪಸಾದ ಸಿಎಂ!

1 Min Read

BREAKING : ರಾಜ್ಯಪಾಲರ ಕಾರ್ಯದರ್ಶಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah resigns

2 Mins Read

ಕರ್ನಾಟಕದ ದೀರ್ಘಾವಧಿ ಸಿಎಂ, ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆ : ಸಿಎಂ ಸಿದ್ದರಾಮರ 5 ದಶಕಗಳ ರಾಜಕೀಯ ಪಯಣ!

2 Mins Read
Recent News

BREAKING : ಸಿದ್ದರಾಮಯ್ಯ ರಾಜೀನಾಮೆಗೆ ಬಿಗ್ ಟ್ವಿಸ್ಟ್ : ರಾಜೀನಾಮೆ ಸಲ್ಲಿಸದೆ ವಾಪಸಾದ ಸಿಎಂ!

BREAKING : ರಾಜ್ಯಪಾಲರ ಕಾರ್ಯದರ್ಶಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah resigns

ಕರ್ನಾಟಕದ ದೀರ್ಘಾವಧಿ ಸಿಎಂ, ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆ : ಸಿಎಂ ಸಿದ್ದರಾಮರ 5 ದಶಕಗಳ ರಾಜಕೀಯ ಪಯಣ!

BIG NEWS : ನೂತನ ಸಂಪುಟ ಸೇರುವ ಮುಸ್ಲಿಂ ನಾಯಕರು ಯಾರು, ಸಂಭಾವ್ಯ ಸಚಿವರು ಯಾರು?

State News
KARNATAKA

BREAKING : ಸಿದ್ದರಾಮಯ್ಯ ರಾಜೀನಾಮೆಗೆ ಬಿಗ್ ಟ್ವಿಸ್ಟ್ : ರಾಜೀನಾಮೆ ಸಲ್ಲಿಸದೆ ವಾಪಸಾದ ಸಿಎಂ!

By ಸುರೇಶ್‌ KARNATAKA 1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ದಿಢೀರ್ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜಭವನಕ್ಕೆ ತೆರಳಿ ತಮ್ಮ…

BREAKING : ರಾಜ್ಯಪಾಲರ ಕಾರ್ಯದರ್ಶಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah resigns

ಕರ್ನಾಟಕದ ದೀರ್ಘಾವಧಿ ಸಿಎಂ, ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆ : ಸಿಎಂ ಸಿದ್ದರಾಮರ 5 ದಶಕಗಳ ರಾಜಕೀಯ ಪಯಣ!

BIG NEWS : ನೂತನ ಸಂಪುಟ ಸೇರುವ ಮುಸ್ಲಿಂ ನಾಯಕರು ಯಾರು, ಸಂಭಾವ್ಯ ಸಚಿವರು ಯಾರು?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.