ಮಂಡ್ಯ : ಗಣೇಶ ಮೂರ್ತಿ ಪ್ರತಿಷ್ಠಾಪಿಸಿ 5ನೇ ದಿನವಾದ ಇಂದು, ರಾಜ್ಯದ ಎಲ್ಲಾ ಕಡೆ ಅತ್ಯಂತ ವಿಜೃಂಭಣೆಯಿಂದ ಗಣೇಶನ ವಿಸರ್ಜನೆ ಮಾಡಲಾಗುತ್ತೆ. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಮುಸ್ಲಿಂರು ಕಲ್ಲು, ಚಪ್ಪಲಿ ಎಸೆದಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲದಲ್ಲಿ ನಡೆದಿದೆ.
ಹೌದು ಗಣಪತಿ ವಿಸರ್ಜನೆ ವೇಳೆ ಹಿಂದೂ ಮುಸ್ಲಿಂ ಗಲಾಟೆ ನಡೆದಿದ್ದು,ಗಣಪತಿ ಮೇಲೆ ಮುಸ್ಲಿಂರು ಕಲ್ಲು , ಚಪ್ಪಲಿ ತೂರಿರುವ ಘಟನೆ ನಾಗಮಂಗಲ ಪಟ್ಟಣದ ಮಂಡ್ಯದ ರಸ್ತೆಯಲ್ಲಿ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಉದ್ತಿಕ್ತ ವಾತಾವರಣ ನಿರ್ಮಾಣವಾಗಿದ್ದು,
ಠಾಣೆ ಮುಂದೆ ಗಣಪತಿ ತಂದು ಹಿಂದೂ ಯುವಕರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲ್ಲು ಚಪ್ಪಲಿ ತೂರಾಟ ಪ್ರಕರಷದಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.ಕೂಡಲೇ ಸ್ಥಳಕ್ಕೆ ಪೊಲೀಸ್ ಇಲಾಖೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದೆ.
ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿಯಾಗಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನುಕೋಮಿನವರು ಕಲ್ಲೆಸೆದಿದ್ದಾರೆ. ಗಣೇಶ ಮೂರ್ತಿಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಈ ವೇಳೆ ಹಿಂದೂ ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ, ನೂಕಾಟ ನಡೆದಿದೆ.
ಈ ವೇಳೆ ನಾಗಮಂಗಲದ ಟೌನ್ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಠಾಣೆ ಬಳಿ ಹಿಂದೂಗಳು ಧರಣಿ ನಡೆಸುತ್ತಿದ್ದಾರೆ. ಕಳೆದ ವರ್ಷವೂ ಇದೇ ದರ್ಗಾ ಮುಂಭಾಗ ಗಲಾಟೆ ನಡೆದಿತ್ತು. ಮೆರವಣಿಗೆ ವೇಳೆ ದರ್ಗಾ ಮುಂಭಾಗ ತಮಟೆ ಡೊಳ್ಳು ಬಾರಿಸಿದಂತೆ ಕಿರಿಕ್ ಮಾಡಿದ್ದರು. ಇದೀಗ ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವರದಿ : ಗಿರೀಶ್ ರಾಜ್ ಮಂಡ್ಯ