ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ನೈರುತ್ಯ ರೈಲ್ವೆಯಿಂದ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದರೇ, ಮತ್ತೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ್ ಕೆ.ಎನ್ ಅವರು ಮಾಹಿತಿ ನೀಡಿದ್ದಾರೆ.
ಈ ರೈಲುಗಳ ಮಾರ್ಗ ಬದಲಾವಣೆ /ಭಾಗಶಃ ರದ್ದು
ಗುಂಟೂರು-ನಂದ್ಯಾಲ ವಿಭಾಗದಲ್ಲಿ ಗಿದ್ದಲೂರು-ದಿಗುವಮೆಟ್ಟ ಜೋಡಿಮಾರ್ಗ ಕಾಮಗಾರಿ ನಡೆಯುವ ಕಾರಣ ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ /ಭಾಗಶಃ ರದ್ದತಿಗೆ ಸೂಚನೆ ನೀಡಿದೆ:
- ದಿನಾಂಕ 18.09.2024 ರಂದು ಹೊರಡುವ ರೈಲು ಸಂಖ್ಯೆ 22831 ಹೌರಾ – ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ರೈಲು ಸೇವೆಯನ್ನು ಧರ್ಮಾವರಂ ಮತ್ತು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಕೃಷ್ಣ ಕೆನಾಲ್, ಗೂಡೂರ್, ರೇಣಿಗುಂಟ, ತಿರುಪತಿ, ಪಾಕಾಲ ಮತ್ತು ಧರ್ಮಾವರಂ ಮಾರ್ಗದ ಮೂಲಕ ಸಂಚರಿಸಲಿರುವುದರಿಂದ ಗುಂಟೂರು, ನರಸರಾವ್ ಪೇಟ, ಮಾರ್ಕಾಪೂರ್ ರೋಡ್, ಗಿದ್ದಲೂರ್, ನಂದ್ಯಾಲ, ಡೋನ್, ಗುತ್ತಿ, ಅನಂತಪುರ್, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ದಿನಾಂಕ 09.2024 ರಂದು ಹೊರಡುವ ರೈಲು ಸಂಖ್ಯೆ 22832 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ- ಹೌರಾ ರೈಲು ಸೇವೆಯನ್ನು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮತ್ತು ಧರ್ಮಾವರಂ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಧರ್ಮಾವರಂ, ಪಾಕಾಲ, ತಿರುಪತಿ, ರೇಣಿಗುಂಟಾ, ಗುಡೂರು ಮತ್ತು ಕೃಷ್ಣಾ ಕೆನಾಲ್ ಮಾರ್ಗದ ಮೂಲಕ ಸಂಚರಿಸಲಿರುವುದರಿಂದ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಅನಂತಪುರ್, ಗುತ್ತಿ, ಡೋನ್, ಗಿದ್ದಲೂರ್, ಮಾರ್ಕಾಪೂರ್ ರೋಡ್, ನರಸರಾವ್ ಪೇಟ ಮತ್ತು ಗುಂಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಈ ರೈಲುಗಳ ಸಂಚಾರ ರದ್ದತಿ
ವಾರಂಗಲ್-ಕಾಜಿಪೇಟ್-ಬಲ್ಲಾರ್ಷಾ ಸೆಕ್ಷನ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಕಾರಣದಿಂದ ರೈಲು ಸಂಖ್ಯೆ 04131 ಪ್ರಯಾಗ್‌ರಾಜ್-ಎಸ್‌ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆಯನ್ನು 06.10.2024 ರಂದು ಮತ್ತು ರೈಲು ಸಂಖ್ಯೆ 04132 ಎಸ್‌ಎಂವಿಟಿ ಬೆಂಗಳೂರು – ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು 09.10.2024ರಂದು ರದ್ದುಗೊಳಿಸಲಾಗಿದೆ.
‘ರಾಜ್ಯ ಸರ್ಕಾರಿ ನೌಕರರ ಸಂಘ’ದ ಚುನಾವಣೆಗೆ ಕ್ರಮವಹಿಸಲು ಸೂಚಿಸಿ: ಸಿಎಂಗೆ ‘ರಮೇಶ್ ಬಾಬು’ ಪತ್ರ
ಸಿಎಂ ಸ್ಥಾನದ ವಿಚಾರ ಗಲ್ಲಿಯಲ್ಲಿ, ಬೀದಿಯಲ್ಲಿ ಮಾತನಾಡುವ ವಿಷಯವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!