ಬೆಂಗಳೂರು : ಇಂದು ಬೆಂಗಳೂರಿನಲ್ಲಿ CCB ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉದ್ಯಮಿಗೆ 1.50 ಕೋಟಿ ವಂಚಿಸಿದ ಕೇಂದ್ರದ GST ಅಧಿಕಾರಿಗಳ ಬಂಧನದ ವಿಚಾರವಾಗಿ, ಜಿಎಸ್‌ಟಿ, ಇಡಿ ಅಧಿಕಾರಿಗಳು ಎಂದು ಹಣ ದೋಚಿದವರನ್ನ ಸೆರೆ ಹಿಡಿಯಲಾಗಿದೆ. ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಅವರು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬೀಗನಂತೆ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿ ಎಸ್ ಟಿ, ED ಅಧಿಕಾರಿಗಳು ಯಾವಾಗ ಉದ್ಯಮಿಯ ಮನೆಗೆ ಬಂದಿದ್ದರು, ಅಲ್ಲದೆ ಬೆದರಿಕೆ ಹಾಕಿ ಯಾವಾಗ ಹಣ ದೋಚಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೂಕ್ಷ್ಮತೆ ಗಮನಿಸಿ ಕೇಸ್ CCB ಗೆ ವರ್ಗಾಯಿಸಲಾಗಿತ್ತು.
ಸಿಸಿಬಿ ಅಧಿಕಾರಿಗಳು ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಒಂದು ಕೋಟಿ ಐವತ್ತು ಲಕ್ಷ ಹಣ ಜಿಎಸ್‌ಟಿ ಹೆಸರಿನಲ್ಲಿ ಪಡೆಯಲಾಗಿತ್ತು. ಜಿ ಎಸ್ ಟಿ ಹಿರಿಯ ಅಧಿಕಾರಿಗಳ ಸಂಪರ್ಕ ಮಾಡಿದಾಗ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿದೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿಕೆ ನೀಡಿದರು.