ದಾವಣಗೆರೆ : ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಸಿಎಂ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಹಿರಿಯ ನಾಯಕರಾದ ಆರ್ ವಿ ದೇಶಪಾಂಡೆ, ಸಚಿವರಾದ ಶಿವಾನಂದ ಪಾಟೀಲ್, ಎಂ ಬಿ ಪಾಟೀಲ್ ಸೇರಿದಂತೆ ಸಿಎಂ ಸ್ಥಾನದ ಕುರಿತಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಇದೀಗ ದಾವಣಗೆರೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಮಣರು ಶಿವಶಂಕರಪ್ಪ ಅವರು ಪ್ರಸಂಗ ಬಂದರೆ ನಾನು ಕೂಡ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಎಂಬ ಪ್ರಶ್ನೆ ಬರುವುದಿಲ್ಲ. ಹೈಕಮಾಂಡ್ ಯಾರನ್ನು ಹೇಳುತ್ತಾರೋ ಅವರೆ ಫೈನಲ್. ಚುನಾಯಿತ ಶಾಸಕರು ಯಾರಿಗೆ ಬಹುಮತ ಕೊಡುತ್ತಾರೋ ಅವರಿಗೆ ನಮ್ಮ ಹೈಕಮಾಂಡ್ ಸೂಚಿಸುತ್ತಾರೆ. ಅಂತ ಪ್ರಸಂಗ ಬಂದರೆ ನಾನು ಕೂಡ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಬಿಡುವುದಿಲ್ಲ ಎಂದರು.