ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್, ಇಂದು ಜೈಲಿನಲ್ಲಿರುವ ಪ್ರಿಸನ್ ಕಾಲ್ ಸಿಸ್ಟಮ್ ಮುಖಾಂತರ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಸುಮಾರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಹೌದು ಪತ್ನಿ ವಿಜಯಲಕ್ಷ್ಮಿ ಜೊತೆ ಫೋನಲ್ಲಿ ದರ್ಶನ್ ಮಾತು ನಡೆಸಿದ್ದಾರೆ. ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ನಟ ದರ್ಶನ್ ಇದೀಗ ವಿಜಯಲಕ್ಷ್ಮಿ ಜೊತೆಗೆ ಮಾತನಾಡಿದ್ದಾರೆ. ವಿಜಯಲಕ್ಷ್ಮಿ ಜೊತೆ 5 ನಿಮಿಷಗಳ ಕಾಲ ದರ್ಶನ್ ಮಾತುಕತೆ ನಡೆಸಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ನಿಂದಲೇ ದರ್ಶನ್ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಕಾನೂನು ಹೋರಾಟದ ಕುರಿತಾಗಿ ಚರ್ಚಿಸಿದ್ದಾರೆ.
ಇನ್ನೂ ವಿಜಯಲಕ್ಷ್ಮಿ ಜೊತೆ ಮಾತನಾಡುವಾಗ ದರ್ಶನ್ ಭಾವುಕರಾಗಿದ್ದಾರೆ. ನಾಳೆ ಜೈಲಿಗೆ ಬರುವಂತೆ ವಿಜಯಲಕ್ಷ್ಮಿಗೆ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ಜೈಲಾಧಿಕಾರಿಗಳಿಗೂ ಕೂಡ ದರ್ಶನ್ ಕುಟುಂಬ ಮಾಹಿತಿ ನೀಡಿದೆ. ವಿಜಯಲಕ್ಷ್ಮಿ ದರ್ಶನ್ ತಾಯಿ ಮೀನಾ ತೂಗುದೀಪ್ ಕೂಡ ಬರುವುದಾಗಿ ಮಾಹಿತಿ ಸಿಕ್ಕಿದೆ. ನಾಳೆ ಸಂಜೆ 4 ಗಂಟೆಯ ನಂತರ ವಿಜಯಲಕ್ಷ್ಮಿ ತಾಯಿ ಆಗಮಿಸಲಿದ್ದಾರೆ.