ದೊಡ್ಡಬಳ್ಳಾಪುರ : ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಗಣೇಶನ ದರ್ಶನಕ್ಕೆ ತೆರಳಿದ್ದ ಬಾಲಕಿಗೆ ವಿದ್ಯುತ್ ತಗುಲಿ ಸಾವನಪ್ಪಿರುವ ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.
ಚೇತನ (12) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ.ಚೇತನ 6ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇನ್ನು ತನ್ನ ತಂದೆಯ ಜೊತೆಗೆ ಅಂಗಡಿಗೆ ತೆರಳಿದ್ದ ಬಾಲಕಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಏರಿಯಾದಲ್ಲಿ ಸ್ಥಾಪಿಸಿದ ಗಣೇಶನನ್ನು ನೋಡಲು ತೆರಳಿದ್ದಾಳೆ.
ಇ ವೇಳೆ ಅಲಂಕಾರಕ್ಕಾಗಿ ಹಾಕಲಾಗಿದ್ದ ಸೀರಿಯಲ್ ಸೆಟ್ ಬಿದ್ದು, ವಿದ್ಯುತ್ ಪ್ರವಹಿಸಿದೆ. ನಂತರ ಸ್ಥಳೀಯರು ಬಾಲಕಿಯನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಘಟನೆ ಕುರಿತು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.