ಕಲಬುರ್ಗಿ : ತನ್ನ ಪತ್ನಿಯೊಂದಿಗೆ ಕೆಲಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಪತ್ನಿಯ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.
ಹೌದು ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದ ಬಳಿ ನಡೆದಿದೆ. ಕಪಿಲ್ ಗಾಯಕ್ವಾಡ್ (37) ಕೊಲೆಯಾದ ವ್ಯಕ್ತಿ. ಕಪಿಲ್ ಗಾಯಕ್ವಾಡ್ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ, ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ಕಪಿಲ್ ಗಾಯಕ್ವಾಡ್ ಅವರನ್ನು ಅಡ್ಡಗಟ್ಟಿ ಪತ್ನಿಯ ಮುಂದೆ ಹತ್ಯೆ ಮಾಡಲಾಗಿದೆ.ಕೊಲೆ ಹಿಂದೆ ಕಪಿಲ್ ಗಾಯಕ್ವಾಡ್ ಪತ್ನಿ ಭಾಗ್ಯ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನೀಖೆ ನಡೆಸುವಂತೆ ಕುಟುಂಬಸ್ಥರು ಆಗ್ತಹಿಸಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.