ಬೀದರ್ : ಅವರು ಸಂಬಂಧದಲ್ಲಿ ಸಹೋದರರು, ಒಬ್ಬರು ಬಿಜೆಪಿಯ ಶಾಸಕರಾದರೆ ಮತ್ತೊಬ್ಬರು ಕಾಂಗ್ರೆಸ್ ನಲ್ಲಿ ಎಂಎಲ್ಸಿ. ಸಹೋದರ ಸಂಬಂಧಿಯಾಗಿರುವಂತಹ ಬಿಜೆಪಿ ಶಾಸಕನಿಗೆ ಕಾಂಗ್ರೆಸ್ ಎಂಎಲ್ಸಿ ಆ ಪಾಕೆಟ್ ಎಂ ಎಲ್ ಎ ಏನಾದ್ರು ಮಾತನಾಡಿದರೆ ನಾಲಿಗೆ ಕಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಬಹಿರಂಗ ಬೆದರಿಕೆ ಹಾಕಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಹೌದು ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ಸಹೋದರ ಸಂಬಂಧಿ ಕಾಂಗ್ರೆಸ್ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.ಹುಮನಾಬಾದ್ ಪಟ್ಟಣದಲ್ಲಿ ನಡೆದ ನೂತನ ಕಾಂಗ್ರೆಸ್ ಸಂಸದರು, ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುವ ವೇಳೆ ನಾಲಗೆ ಹರಿಬಿಟ್ಟಿರುವ ಘಟನೆ ನಡೆದಿದೆ.
ಪಾಕೀಟ್ ಎಂಎಲ್‌ಎ ಏನಾದ್ರೂ ಅಂದ್ರೆ ನಾಲಗೆ ಕಟ್ ಮಾಡುತ್ತೇನೆ. ನೀವು ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬಿಸಾಕುತ್ತೇವೆ ಸ್ವಲ್ಪ ಶಾಂತವಾಗಿರಬೇಕು ಎನ್ನುವ ಮೂಲಕ ಬಹಿರಂಗ ವೇದಿಕೆ ಮೇಲೆಯೇ ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ಬೆದರಿಕೆ ಹಾಕಿದ್ದಾರೆ
ಚಂದ್ರಶೇಖರ್ ಪಾಟೀಲ್, ನಮ್ಮ ಅಣ್ಣ ರಾಜಶೇಖರ್ ಪಾಟೀಲ್ ಈ ವಿಚಾರದಲ್ಲಿ ಶಾಂತವಾಗಿರಬೇಕು. ನಾನು ನಮ್ಮಣ್ಣ ಭೀಮು ಪಾಟೀಲ್ ಶಾಸಕ ಸಿದ್ದು ಪಾಟೀಲನ ನಾಲಗೆ ಕಟ್ ಮಾಡ್ತೇವೆ. ತಾವು ಸ್ವಲ್ಪ ಸಮಾಧಾನದಿಂದ ಇರಬೇಕು ನಾವು ಇಬ್ಬರು ಅಣ್ಣತಮ್ಮ ಇಲ್ವಾ ಎಂದಿದ್ದಾರೆ.