ಬೆಂಗಳೂರು : ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಮತ್ತು ಯುವತಿಯರಿಗೆ ಸೇಫ್ ಆಗಿದೆಯಾ? ಎಂಬ ಅನುಮಾನ ಮೂಡುತ್ತಿದೆ. ಹೌದು ಏಕೆಂದರೆ ಇತ್ತೀಚಿಗೆ ಬೆಂಗಳೂರಿನಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಹಾಲು ತರಲು ತೆರಳಿದ್ದ ಮಹಿಳೆಯನ್ನು ಎಳೆದೋಯ್ಯಲು ಯತ್ನಿಸಿದ ವ್ಯಕ್ತಿಯನ್ನು ಹಿಡಿದುಕೊಂಡು ಯುವಕರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರದ ಬನ್ನೇರುಘಟ್ಟದಲ್ಲಿ ನಡೆದಿದೆ.
ಹೌದು ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬನ್ನೇರುಘಟ್ಟ ರಾಷ್ಟ್ರೀಯ ಕಲ್ಕೆರೆ ಕಾಲೋನಿ ಬಳಿ ರಾತ್ರಿ ಘಟನೆ ನಡೆದಿದೆ. ಮಹಿಳೆ ಹಾಲು ತೆಗೆದುಕೊಂಡು ಬರಲು ತಳ್ಳಿದಾಗ ನಶೆಯಲ್ಲಿದ್ದ ವ್ಯಕ್ತಿ ಈ ವೇಳೆ ಮಹಿಳೆಯ ಬಾಯಿಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದಾನೆ. ಆತಂಕಗೊಂಡು ಸಹಾಯಕ್ಕಾಗಿ ಮಹಿಳೆ ಕಿರುಚಿಕೊಂಡಿದ್ದಾಳೆ.
ಮಹಿಳೆಯ ನೆರವಿಗೆ ಬಂದ ಗ್ರಾಮದ ಯುವಕರ ಗುಂಪು, ಕುಡಿದ ನಶೆಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ.ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.ಹಲ್ಲೆ ಮಾಡಿದ ನಂತರ ಆಟೋದಲ್ಲಿ ಕರೆದೊಯ್ಯುವಾಗ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ವ್ಯಕ್ತಿಯನ್ನು ಯುವಕರು ಬನ್ನೇರುಘಟ್ಟ ಪೊಲೀಸರು ವಶಕ್ಕೆ ನೀಡಿದ್ದಾರೆ. ಗಯಾಳು ವ್ಯಕ್ತಿಯನ್ನು ಕೊಟ್ಟಿಗೆರೆ ಆಕಾಶಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪರಿಚಿತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.