ಬೆಂಗಳೂರು: ಬೆಂಗಳೂರು ನಡೆಯುತ್ತಿರುವದೇ ನಮ್ಮಿಂದಲೇ ಎನ್ನುವಂತ ಹೇಳಿಕೆಯನ್ನು ಹೊರ ರಾಜ್ಯದ ಯುವತಿಯೊಬ್ಬಳು ಹೇಳಿದ್ದಾರೆ. ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇಂತಹ ಹೇಳಿಕೆ ನೀಡಿದಂತ ಯುವತಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಭಾರತೀಯ ಮೂಲದ ಯುವತಿಯೊಬ್ಬಳು ನೀಡಿರುವಂತ ಹೇಳಿಕೆ, ಈಗ ಸಾಕಷ್ಟು ಆಕ್ರೋಶ, ಜೊತೆ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ. ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ನಡೆದಿತ್ತು. ಈಗ ಆಟೋ ಚಾಲಕನ ವಿರುದ್ಧ ಕಾನೂನು ಕ್ರಮ ಕೂಡ ಆಗಿದೆ. ಈ ಬೆನ್ನಲ್ಲೇ ಹೊರ ರಾಜ್ಯದ ಯುವತಿಯೊಬ್ಬರು ನೀಡಿರುವಂತ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ.
It's highly derogatory remarks about Karnataka and its people. She is calling Kannadigas fuckers and says Bengaluru's development is because of North Indians and insult the local population. Why can't they stay in their hometown and develop their own economy?#Bengaluru… pic.twitter.com/YGl4sGMk6e
— Enigma (@EnigmaticReddy) September 6, 2024
ಓಲಾ ಆಟೋದಲ್ಲಿ ನಡೆದಂತ ಘಟನೆಯನ್ನು ಖಂಡಿಸಿ ಮಾತನಾಡಿರುವಂತ ವೀಡಿಯೋವೊಂದನ್ನು ಯುವತಿ ಹಂಚಿಕೊಂಡಿದ್ದು, ಅದರಲ್ಲಿ ಬೇರೆ ಕಡೆಯಿಂದ ಬಂದು ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಇಡೀ ಬೆಂಗಳೂರು ಭಿವೃದ್ಧಿಯಾಗುತ್ತಿದೆ. ನಾವೆಲ್ಲ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ ಎಂಬುದಾಗಿ ಹೇಳಿಕೊಂಡಿದ್ದಾರೆ.
ಸದ್ಯ ಯುವತಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬೆಂಗಳೂರು ನಮ್ಮಿಂದಲೇ ಅಭಿವೃದ್ಧಿಯಾಗುತ್ತಿರುವುದು ಎಂಬುದಾಗಿ ಹೇಳಿಕೆ ನೀಡಿದಂತ ಯುವತಿಯ ವಿರುದ್ಧ ಕನ್ನಡಿಗರೂ ಕಾಮೆಂಟಿನಲ್ಲಿ ಕಠುವಾಗೇ ಟೀಕಿಸಿದ್ದಾರೆ.
ಪ್ರಯಾಣಿಕರೇ ದಯವಿಟ್ಟು ಗಮನಿಸಿ : ಇನ್ಮುಂದೆ ಈ ವಯಸ್ಸಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು!