ಬೆಂಗಳೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ ಹೊತ್ತಲ್ಲೇ ಡೆಂಗ್ಯೂ ಕೇಸ್ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಾಧ್ಯಂತ 169 ಡೆಂಗ್ಯೂ ಕೇಸ್ ಪತ್ತೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 82, ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ತಲಾ ಮೂರು, ಕೋಲಾರ, ಶಿವಮೊಗ್ಗ, ವಿಜಯನಗರ ಹಾಗೂ ಕೊಡಗು ಜಿಲ್ಲೆಯಲ್ಲಿ ತಲಾ 2 ಕೇಸ್ ಪತ್ತೆಯಾಗಿರುವುದಾಗಿ ಹೇಳಿದೆ.
ಚಿಕ್ಕಬಳ್ಳಾಪುರ 3, ತುಮಕೂರು 8, ಚಿತ್ರದುರ್ಗ, ದಾವಣಗೆರೆ, ಧಾರವಾಡ ಜಿಲ್ಲೆಯಲ್ಲಿ ತಲಾ 4 ಕೇಸ್ ಪತ್ತೆಯಾದರೇ, ವಿಜಯಪುರ 1, ಗದಗ 5, ಕಲಬುರ್ಗಿ 12, ಮೈಸೂರು 7 ಸೇರಿ ಇತರೆ ಜಿಲ್ಲೆಗಳು ಸೇರಿದಂತೆ 169 ಕೇಸ್ ದೃಢಪಟ್ಟಿದೆ. ಹೀಗಾಗಿ 26,114 ಡೆಂಗ್ಯೂ ಕೇಸ್ ದಾಖಲಾದಂತೆ ಆಗಿದೆ. ಇದುವರೆಗೆ 12 ಮಂದಿ ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
BREAKING: ಉತ್ತರ ಪ್ರದೇಶದಲ್ಲಿ ಮಿನಿ ಟ್ರಕ್-ಬಸ್ ನಡುವೆ ಭೀಕರ ಅಪಘಾತ: 12 ಮಂದಿ ದುರ್ಮರಣ | UP Accident
ಬೆಂಗಳೂರಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಸಕಲ ಸಿದ್ಧತೆ: 462 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ವ್ಯವಸ್ಥೆ