ಹಾಸನ : ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದ ಯೋಜನೆ ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದರು.
ಎತ್ತಿನಹೊಳೆ ಯೋಜನೆ ಪೂರ್ಣವಾಗಲಿದೆ ಯಾವುದೇ ಸಂಶಯ ಬೇಡ. ಎರಡನೇ ಹಂತದ ಯೋಜನೆಯ ಕಾಮಗಾರಿ 2026 27ಕ್ಕೆ ಮುಗಿಯಲಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಯಾವುದೇ ಅನುಮಾನ ಬೇಡ. ಎತ್ತಿನಹೊಳೆ ಯೋಜನೆ ಕಾಮಗಾರಿಗೆ ನಾನೇ ಭೂಮಿ ಪೂಜೆ ಮಾಡಿದ್ದು. 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಾನು ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ್ದೆ. ಇಂದು ನಾನೇ ಆ ಒಂದು ಕಾಮಗಾರಿಯ ಉದ್ಘಾಟನೆ ಮಾಡಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು.
ಈ ಒಂದು ಯೋಜನೆಯು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ರಾಮನಗರ, ಚಿಕ್ಕಮಂಗಳೂರು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿತ್ತು. 7 ಜಿಲ್ಲೆಗಳಿಗೆ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 527 ಕೆರೆಗಳಿಗೆ ನೀರು ತುಂಬಿಸುವ ಕುಡಿಯುವ ನೀರಿನ ಯೋಜನೆಯಾಗಿದೆ ಎಂದು ತಿಳಿಸಿದರು.
ಕೋಲಾರ ಚಿಕ್ಕಬಳ್ಳಾಪುರ ದರು ಯಾರು ಚಿಂತೆ ಮಾಡಬೇಡಿ 57 ಕೆರೆಗಳನ್ನು ನಾವು ತುಂಬಿಸುತ್ತೇವೆ ಎನ್ನುವ ಭರವಸೆ ಕೊಡುತ್ತೇವೆ ಯೋಜನೆ ಬಗ್ಗೆ ಬಿಜೆಪಿ ಜೆಡಿಎಸ್ ನವರು ಟೀಕೆ ಮಾಡಿದ್ದರು ಇನ್ನು ಆರು ಏಳು ಸಾವಿರ ಕೋಟಿ ಹಣ ಕೊಟ್ಟರೆ ಯೋಜನೆ, ಸಂಪೂರ್ಣವಾಗುತ್ತದೆ ನಮ್ಮ ಅವಧಿಯಲ್ಲಿ ಯುವಜನಿಯನ್ನು ಮುಗಿಸುತ್ತೇವೆ ಈ ಯೋಜನೆ ವಿಚಾರವಾಗಿ ನಾವು ಬಯಸಿಕೊಂಡಿದ್ದೇವೆ ಇವತ್ತು ವರ್ಷದಲ್ಲಿ ಎಷ್ಟು ನೀರು ಹೋಗಿದೆ?
ಅವರು ಇಂಥಾ ಯೋಜನೆಗಳಿಗೆ ಖರ್ಚು ಮಾಡುವುದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಯಾವ ಯೋಜನೆಯನ್ನು ಮಾಡಿಲ್ಲ. ನಾವು ಕೈಗೊಂಡ ಯೋಜನೆಗಳನ್ನು ಮಾಡೇ ತೀರುತ್ತೇವೆ. ಟೀಕೆಗಳು ಸಾಯುತ್ತವೆ ಮಾಡಿದ ಸಾಧನೆಗಳು ಉಳಿಯುತ್ತವೆ. ನಮ್ಮದು ಅದೇ ಉದ್ದೇಶವಾಗಿದ್ದು ಜನರಿಗೆ ಕುಡಿಯುವ ನೀರು ನೀಡಬೇಕು.ನಾಡಿನ ಬಡವರು ರೈತರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಮೂಲಸೌಕರ್ದಿಂದ ವಂಚಿತರಾಗಬಾರದು. ಎಂದರು.