ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ, ಕಾರ್ಕಳದಲ್ಲಿ ಟೆಕ್ಸ್ ಪಾರ್ಕ್ ಸ್ಥಾಪನೆ ಸೇರಿದಂತೆ 36 ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಆ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿಯನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೀಡಿದರು. ಇಂದು ಒಟ್ಟು 36 ವಿಷಯಗಳ ಬಗ್ಗೆ ಚರ್ಚೆಯಾಗಿದೆ. 35 ವಿಷಯಗಳಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಪಟ್ಟಿಯಲ್ಲಿಲ್ಲದ ಮೂರು ವಿಷಯ ಚರ್ಚೆಯಾಗಿದೆ ಎಂದರು.
ಮಹದಾಯಿ ಯೋಜನೆಗೆ ಅನುಮತಿ ತಡೆ ವಿಚಾರವಾಗಿ ವನ್ಯಜೀವಿಮಂಡಳಿ ಅನುಮೋದನೆ ನೀಡಿಲ್ಲ. ಕೆಲವು ಕಾರಣ ಕೊಟ್ಟು ಮುಂದೂಡಿದೆ. ಇದು ಕನ್ನಡಿಗರಿಗೆ ನಿರಾಸೆ ತಂದಿದೆ. ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಆಗ್ತಿದೆ. ಗೋವಾದ 400 ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ನೀಡುತ್ತೆ. ಆದರೆ ನಮ್ಮ ಪ್ರಪೋಸಲ್ ಮುಂದೂಡಿದೆ. 435 ಎಕರೆ ವಿದ್ಯುತ್ ಮಾರ್ಗಕ್ಕೆ ಅರಣ್ಯ ಭೂಮಿ ಬಳಕೆಯಾಗಿದೆ. ಗೋವಾ ತಮ್ನೂರು ವಿದ್ಯತ್ ಮಾರ್ಗಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡುತ್ತೆ. ಅದಕ್ಕೆ ಕ್ಯಾಬಿನೆಟ್ ಕಳವಳ ವ್ಯಕ್ತಪಡಿಸಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸರ್ವಪಕ್ಷ ನಿಯೋಗ ಪ್ರಧಾನಿ ಬಳಿ ಒಯ್ಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಸುಪ್ರೀಂ ಮೆಟ್ಟಿಲೇರೋಕೆ ಕ್ಯಾಬಿನೆಟ್ ತೀರ್ಮಾನಿಸಿದೆ ಎಂದರು.
ಮಹದಾಯಿ ಕುಡಿಯುವ ನೀರು ಯೋಜನೆವಿಚಾರವಾಗಿ ವನ್ಯಜೀವಿ ಮಂಡಳಿ ನಡೆಯ ವಿರುದ್ಧ ದೂರು ನೀಡಲಾಗುತ್ತದೆ. ಸುಪ್ರೀಂ ಮೆಟ್ಟಿಲೇರೋಕೆ ರಾಜ್ಯದ ನಿರ್ಧಾರಿಸಿದೆ. ಸರ್ವಪಕ್ಷ ನಿಯೋಗ ಒಯ್ಯುವ ಬಗ್ಗೆ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಹೇಳಿಕೆ ನೀಡಿದ್ದರು. ಕಂಟೆಂಟ್ ಆಫ್ ಕೋರ್ಟ್ ಎಂದಿದ್ದರು. ಆದರೆ ಅದು ಅವರ ತಪ್ಪು ಗ್ರಹಿಕೆಯಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಇಲ್ಲಿ ಕೋರ್ಟ್ ಕಂಟೆಂಫ್ಟ್ ಆಗಿಲ್ಲ ಎಂಬುದಾಗಿ ಸಮರ್ಥನೆ ನೀಡಿದರು.
ಕೋವಿಡ್ ಹಗರಣದ ವರದಿ ಬಗ್ಗೆ ಚರ್ಚೆ ನಡೆಸಲಾಯಿತು. ನೂರಾರು ಕೋಟಿ ಅವ್ಯವಹಾರದ ಬಗ್ಗೆ ಪ್ರಸ್ತಾಪವಾಗಿದೆ. ಜಸ್ಟೀಸ್ ತಮ್ಮವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹಲವು ಮಿಸ್ಸಿಂಗ್ ಫೈಲ್ಸ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಪಬ್ಲಿಕ್ ಅಕೌಂಟ್ ಕೊಟ್ಟ ವರದಿಯನ್ನ ಉಲ್ಲೇಖಿಸಿದೆ. ವಿವರವಾದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ವರದಿ ಪರಿಶೀಲನೆಗೆ ಹಿರಿಯ ಅಧಿಕಾರಿಗಳಿ ಹೊಣೆ ನೀಡಲಾಗಿದೆ. ತಿಂಗಳೊಳಗೆ ಪರಿಶೀಲಿಸಿ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ. ಇದು ಮಧ್ಯಂತರ ವರದಿ ಆಧರಿಸಿ ಸೂಚನೆ ನೀಡಲಾಗಿದೆ ಎಂದರು.
ಅತೀಕ್ ಸೇರಿ ಇಬ್ಬರು ಅಧಿಕಾರಿಗಳಿಗೆ ಹೊಣೆ ಮಾಡಲಾಗುತ್ತಿದೆ. ಮಧ್ಯಂತರ ವರದಿ ಪರಿಶೀಲಿಸುವ ಜವಾಬ್ದಾರಿ ನೀಡಲಾಗುವುದು. ಪರಿಶೀಲಿಸಿ ಕ್ರಮದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ನಿರ್ಧಿಷ್ಟ ವ್ಯಕ್ತಿಯ ಬಗ್ಗೆ ನಮಗೆ ಗೊತ್ತಿಲ್ಲ. ವರದಿಯನ್ನ ನಾನು ಪರಿಶೀಲಿಸಿಲ್ಲ ಎಂದು ಹೇಳಿದರು.
ನೂರಾರು ಕೋಟಿ ದುರ್ವವ್ಯವಹಾರ ಆಗಿದೆ. ಕೊಟ್ಟ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಸಂಪೂರ್ಣ ಡಿಟೇಲ್ಸ್ ನಮಗೆ ಗೊತ್ತಿಲ್ಲ. ಇಂಟರಿಮ್ ರಿಪೋರ್ಟ್ ಟೇಬಲ್ ಮಾಡಬಹುದು. ಇಲ್ಲವೇ ಬೇಗ ವರದಿ ಕೊಟ್ಟರೆ ಬೇಗ ಮಾಡಬಹುದು ಎಂದು ತಿಳಿಸಿದರು.
ಕಾರ್ಕಳದಲ್ಲಿ ಟೆಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. 27.29 ಲಕ್ಷದಲ್ಲಿ ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದೆ. ಉದಯೋನ್ಮುಕ ತಂತ್ರಜ್ಙಾನ ತರಬೇತಿ ನೀಡಲಾಗುತ್ತದೆ. ನಿಪುಣ ಕರ್ನಾಟಕ ಕಾರ್ಯಾಯೋಜನೆಗೆ ಒಪ್ಪಿಗೆ ನೀಡಲಾಗಿದೆ. 100 ಕೋಟಿ ಅನುದಾನದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಸ್ಥಳೀಯ ಉದ್ಯೋಗಾವಕಾಶ ಸುಧಾರಣೆಗೆ ಕ್ರಮವಹಿಸಲಾಗಿದೆ. ಜೈವಿಕ ತಂತ್ರಜ್ಙಾನ ನೀತಿ 2024-29ಗೆ ಅನುಮೋದನೆ ನೀಡಲಾಗಿದೆ. ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 18.54 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆ ಯಥಾಸ್ಥಿತಿ ಮುಂದುವರಿಕೆ ಮಾಡಲಾಗುತ್ತಿದೆ. ಡಿಬಿಟಿ ವ್ಯವಸ್ಥೆ ಮುಂದುವರಿಕೆಗೆ ಒಪ್ಪಿಗೆ ನೀಡಲಾಗಿದೆ. ಸಂಪುಟದ ಮುಂದೆ ಮೂರು ಪ್ರಸ್ತಾವನೆ ಬಂದಿದ್ದವು. ಅದರಲ್ಲಿ ಫುಡ್ ಕಿಟ್ ನೀಡುವ ಪ್ರಸ್ತಾಪವಿತ್ತು. ಅರ್ಧ ಕೆಜಿ ತೊಗರಿ, ಎಣ್ಣೆ, ಸಕ್ಕರೆ ಕೊಡುವ ಪ್ರಸ್ತಾವನೆ ಇತ್ತು. ಆದರೆ ಅದನ್ನ ಕೈಬಿಡಲಾಗಿದೆ. ಯಥಾಸ್ಥಿತಿ 170 ರೂ ಹಣ ವಿತರಣೆ ಮುಂದುವರಿಕೆ ಮಾಡಲಾಗುತ್ತಿದೆ ಎಂದರು.
59 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯಕ್ಕೆ ಒಪ್ಪಿಗೆ ನೀಡಲಾಗುತ್ತಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ನೀಡಲಾಗುತ್ತಿದೆ. ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕ ನೊಂದಣಿ ಶುಲ್ಕ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ಶೇ.35ರಷ್ಟು ಏರಿಕೆಗೆ ಸರ್ಕಾರದ ತೀರ್ಮಾನ ಕೈಗೊಂಡಿದೆ. ನ್ಯಾಯಾಂಗ ನೇಮಕಾತಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದೆ. ಕಿದ್ವಾಯಿ ಗ್ರಂಥಿ ಸಂಸ್ಥೆಗೆ ಉಪಕರಣ ಖರೀದಿಗಾಗಿ 70 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಮೈಸೂರಿನ ನೆಪ್ರೋ ಆಸ್ಪತ್ರೆ ಮೇಲ್ದರ್ಜೆಗೇರಿಕೆಗಾಗಿ 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿಯಲ್ಲಿ ಮಕ್ಕಳ ಆರೋಗ್ಯ ಘಟಕ ನಿರ್ಮಿಸಲು 221 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ನೆಪ್ರೋ ಸಂಸ್ಥೆಗೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನೊಂದಣಿ ಮುದ್ರಾಂಕ ಇಲಾಖೆ ವರ್ಗಾವಣೆಗೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.
32 ವಾಹನ ಚಾಲನಾ ಪರೀಕ್ಷಾ ಕೇಂದ್ರ ಸ್ಥಾಪನೆಯನ್ನು ರಾಜ್ಯದ 32 ಕಡೆಗಳಲ್ಲಿ ಸ್ಥಾಪನೆಗೆ ಅನುದಾನ ಕಲ್ಪಿಸಲಾಗುತ್ತಿದೆ. 15 ವರ್ಷಗಳ ಹಳೆಯ ವಾಹನ ನಾಶಕ್ಕೆ ಅವಕಾಶ ನೀಡಲಾಗಿದೆ. ದಂಡ ಶುಲ್ಕವಿಲ್ಲದೆ ನಾಶ ಪಡಿಸಲು ಸಮಯ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವರ್ಷದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಸಾರಿಗೆ ಆಯುಕ್ತರ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ 10 ಕೋಟಿ ಅಂದಾಜು ಮೊತ್ತಕ್ಕೆ ಸಮ್ಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 50:50 ಮಾದರಿ ವಸತಿ ನಿವೇಶನಕ್ಕಾಗಿ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮಹದಾಯಿ ಪ್ರಾಧಿಕಾರ ಯೋಜನೆಗೆ 1.67 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. ಬೈಲಹೊಂಗಲ ಏತನೀರಾವರಿಗೆ 149 ಕೋಟಿ ಅನುದಾನ ಒದಗಿಸಲಾಗಿದೆ. ವಿಧಾನಮಂಡಲ ಅನರ್ಹತಾ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರ ನಾಗರಿಕಕರಿಗೆ ಗುಡ್ ನ್ಯೂಸ್ ಎನ್ನುವಂತೆ ದಿನಾಂಕ 30-11-2024ರವರೆಗೆ ಆಸ್ತಿ ತೆರಿಗೆ ಪಾವತಿಸಲು ಸಮಯ ವಿಸ್ತರಣೆಗೆ ಸಂಪುಟ ಒಪ್ಪಿಗೆ ನೀಡಿದೆ. ಪೆರಿಪರಲ್ ರಸ್ತೆಗೆ ಬಂಡವಾಳ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಕ್ಕೆ ಸಮ್ಮತಿ ನೀಡಲಾಗಿದೆ ಎಂದು ಹೇಳಿದರು.
ರಾಜ್ಯಪಾಲರು 11 ಬಿಲ್ ವಾಪಸ್ ಕಳಿಸಿದ್ದರು. 5 ಬಿಲ್‌ಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಸಂಪೂರ್ಣ ಮಾಹಿತಿಯನ್ನ ಒದಗಿಸಿದ್ದೇವೆ. 6 ಬಿಲ್ ಗಳಿಗೆ ಮಾಹಿತಿ ಸಂಗ್ರಹಿಸಿ ಕಳಿಸಬೇಕಿದೆ ಎಂದು ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಆಸ್ತಿ ತೆರಿಗೆ ಪಾವತಿಸಲು ಸಮಯ ವಿಸ್ತರಣೆ
BIG NEWS: ಮುಂದಿನ ಸಚಿವ ಸಂಪುಟ ಸಭೆ ‘ಕಲಬುರಗಿ’ಯಲ್ಲಿ ನಡೆಸಲು ಸಿಎಂ ಒಪ್ಪಿಗೆ: ಸಚಿವ ಪ್ರಿಯಾಂಕ್ ಖರ್ಗೆ
ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’