ಬೆಂಗಳೂರು: ನಗರದ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ಬಿಎಂಟಿಸಿ ಬಸ್ ಸಂಚಾರದ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮಾರ್ಗವನ್ನು ದಿನಾಂಕ 09.09.2024 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸು/ ಸುತ್ತುವಳಿಗಳ ಸಂಖ್ಯೆ |
253ಸಿ | ಯಶವಂತಪುರ | ಕನಸವಾಡಿ | ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೇಸರಘಟ್ಟ ಟಿ. ಬಿ. ಕ್ರಾಸ್, ಕುಕ್ಕನಹಳ್ಳಿ, ಮಧುರೆ | 1 ಬಸ್ಸು
04 ಸುತ್ತುವಳಿಗಳು
|
ಹೀಗಿದೆ ವೇಳಾಪಟ್ಟಿ
ಯಶವಂತಪುರ ಬಿಡುವ ವೇಳೆ |
0830, 1205 |
ಕನಸವಾಡಿ ಬಿಡುವ ವೇಳೆ |
1030, 1400 |
ನಕಲಿ ವಿದ್ಯಾರ್ಥಿಗಳನ್ನು ದಾಖಲಿಸಿದ 27 ಶಾಲೆಗಳಿಗೆ ಸಿಬಿಎಸ್ಇ ಶೋಕೇಸ್ ನೋಟಿಸ್ | CBSE issues showcase notice
ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಸರಿಯಾದ ‘ಶಿಕ್ಷಣ’ ಇಲ್ಲದೇ ಬರಬಾರದು ಅನಿಸಿತು: ಡಿಕೆಶಿ
ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’