ಬೆಂಗಳೂರು : ಬೆಂಗಳೂರಿನಲ್ಲಿ ನಟೋರಿಯಸ್ ಬಚ್ಚಾಖಾನ್ ನನ್ನು ಬಂಧಿಸಲಾಗಿದ್ದು, ನಿನ್ನೆ ಹುಬ್ಬಳ್ಳಿ ಸಿಸಿಬಿ ಪೊಲೀಸರು ಬೆಂಗಳೂರಲ್ಲಿ ಆತನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಆತನನ್ನು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಬಚ್ಚಾ ಖಾನ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ಇದ್ದ ಈತ 45 ದಿನಗಳ ವರೆಗೆ ಪೆರೋಲ್ ಮೇಲೆ ಬಚ್ಚಾ ಖಾನ್ ಹೊರ ಬಂದಿದ್ದ. ಈ ವೇಳೆ ನಿನ್ನೆ ಪೊಲೀಸರ ಮೇಲೆ ಬಚ್ಚಾಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಸುಳ್ಳು ಕೇಸ್ ಹಾಕಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾನೆ.
ಸುಳ್ಳು ಕೇಸ್ ಹಾಕಿದ್ದಾರೆಂದು ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಬಚ್ಚಾಖಾನ್ ಅಸಾಮಾಧಾನ ಹೊರಹಕಿದ್ದಾನೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಚ್ಚಾಖಾನ್ ಇಷ್ಟು ದಿನ ಇದ್ದ. ಅದಾದ ಬಳಿಕ ಪೆರೊಲ್ ಮೇಲೆ ಬಚ್ಚಾಖಾನ್ ಹೊರಗಡೆ ಬಂದಿದ್ದ. ಹುಬ್ಬಳ್ಳಿ ಸಿಸಿಬಿ ಪೊಲೀಸರಿಂದ ಇದೀಗ ಬಚ್ಚಾಖಾನ್ ನನ್ನು ಬಂಧಿಸಲಾಗಿದೆ.ಪೆರೋಲ್ ಮೇಲೆ ಹೊರಗಡೆ ಬಂದಿದ್ದ ಆಟ ಹಲವರಿಗೆ ಬೆದರಿಕೆ ಹಾಕಿದ್ದ. ಈ ಒಂದು ಆರೋಪದ ಮೇಲೆ ಇದೀಗ ಹುಬ್ಬಳ್ಳಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಚ್ಚಾಖಾನ್ ಹಲವಾರು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಬೆಂಗಳೂರಿನ ಬಿಲ್ಡರ್ ಸುಬ್ಬಾರೆಡ್ಡಿ ಕೊಲೆ ಕೇಸಿನಲ್ಲಿ ಎರಡನೇ ಆರೋಪಿಯಾಗಿದ್ದ ಬಚ್ಚಾಖಾನ್ ಅಪರಾಧಿ ಅಂತಾ ಸಾಬೀತಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.ಇನ್ನು 2009ರಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದಾಗ ಈತನ ಬಳಿ ಗಾಂಜಾ ಪತ್ತೆಯಾಗಿತ್ತು. ಇದೇ ವೇಳೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಈತ ಹಲ್ಲೆಯನ್ನೂ ಮಾಡಿದ್ದ.