ಬೆಂಗಳೂರು : ದರ್ಶನ್ ಅವರ ವಿರುದ್ಧದ ಕೊಲೆ ಕೇಸ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಬೆನ್ನಲ್ಲೇ, ಅವರ ಜಾಮೀನು ಅರ್ಜಿಯ ಕುರಿತು ಚರ್ಚೆಗಳು ಆರಂಭವಾಗಿವೆ. ದರ್ಶನ್ ಪರವಾಗಿ ಮಾತನಾಡಿರುವ ಸಹನಟ ಪುಂಗ ಉಮೇಶ್, ಶ್ರೀರಾಮನು ಕೂಡ ಮೂರ್ನಾಲ್ಕು ಮರ್ಡರ್ ಮಾಡಿದ್ದ, ದರ್ಶನ್ ಮಾಡಿದ್ರಲ್ಲಿ ತಪ್ಪೇನು? ಎಂದು ರೇಣುಕಾಸ್ವಾಮಿ ಕೃತ್ಯವನ್ನು ಸಮರ್ಥಿಸಿ ವಿವಾದ ಸೃಷ್ಟಿಸಿದ್ದಾರೆ.
ಹೌದು ನಟ ದರ್ಶನ್ ಗೆ ಸ್ಯಾಂಡಲ್ ವುಡ್ ನಲ್ಲೂ ಕೆಲವರು ಅಭಿಮಾನಿಗಳಿದ್ದಾರೆ. ಅದರಲ್ಲಿ ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸಹನಟ ಪುಂಗ ಉಮೇಶ್ ಕೂಡ ಒಬ್ಬರು. ಇದೀಗ ಅವರು ರೇಣುಕಾಸ್ವಾಮಿ ಕೃತ್ಯವನ್ನು ಸಮರ್ಥನೆ ಮಾಡಿಕೊಂಡು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಪ್ರಪಂಚದಲ್ಲಿ ಯಾರೂ ಮಾಡಬಾರದ ತಪ್ಪೇನೂ ಇವರು ಮಾಡಿಲ್ಲ. ಏನ್ ಸಮಸ್ಯೆ ಆಗಿದೆ ಅನ್ನೋದನ್ನ ಹೇಳಿ. ಇಡೀ ಭಾರತ ದೇಶದಲ್ಲಿ ಈವರೆಗೂ ಒಂದೂ ಕೊಲೆನೂ ಆಗಿಲ್ವಾ? ಇವರೊಬ್ರೆ ಮಾಡಿರೋದಾ? ಇದನ್ನು ನೀವು ಹೇಳಿ. ಇವರೊಬ್ರೆ ಮಾಡಿರೋದಾ? ನನ್ನ ಪ್ರಶ್ನೆಗೆ ಉತ್ತರ ಹೇಳಿ. ಅಂಥಾ ಸತ್ಯ ಹರಿಶ್ಚಂದ್ರ ಎರಡೂವರೆ ವರ್ಷ ಮೂರು ವರ್ಷ ಅವನು ಕಷ್ಟಪಟ್ಟ.
ರಾಮ ಮೂರು-ನಾಲ್ಕು ಮರ್ಡರ್‌ಗಳನ್ನು ಮಾಡಿದ. ವಾಲಿ, ಸುಗ್ರೀವ, ರಾವಣ ಎಲ್ಲರನ್ನೂ ಸಾಯಿಸಿದ. ರಾಮನಿಗೆ ಏನಾದ್ರೂ ಅಂದ್ರಾ. ಇವರು ಕೂಡ ಏನೋ ಒಂದು ಹೆಣ್ಣಿಗೆ ಅವಮಾನವಾಗಿದ್ದನ್ನ ಪ್ರಶ್ನಿಸಿದ್ದಾರೆ. ಭಾರತ ಮಾತೆ ಅಂತೀರಾ? ತಾಯಿ ಅಂತೀರಾ? ಹೆಣ್ಣನ್ನ ಪೂಜೆ ಮಾಡ್ಬೇಕು ಅಂತೀರಾ? ಒಂದು ಹೆಣ್ಣಿಗೆ ಅವಮಾನ ಆದ್ಮೇಲೆ ಅವನು ಹೋರಾಟ ಮಾಡ್ಬಾರ್ದಾ? ಅದನ್ನ ಕೇಳಬಾರದಾ?’ ಎಂದು ಪುಂಗ ಉಮೇಶ್ ಹೇಳಿದ್ದಾರೆ.
ಇನ್ನು ಪುಂಗ ಉಮೇಶ್ ಅವರು ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳಲ್ಲಿ ಒಬ್ಬರು ಇಷ್ಟು ದಿನದಲ್ಲಿ ಇದೊಂದೇ ಬೆಂಕಿಯಂತಹ ಮಾತು ಆಡಿದ್ದೀರ ಸರ್ ಅಂತ ಕಮೆಂಟ್ ಮಾಡಿದರೆ, ಮತ್ತೊಬ್ಬರು ಯಾರಿಗೆ ಅವಮಾನವಾದರೂ ಅದನ್ನ ಕೇಳೋಕೆ ದೇಶದಲ್ಲಿ ಕಾನೂನು ಇದೆ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಹೆಚ್ಚಿನವರು , ಭಾರತ ದೇಶದಲ್ಲಿ ಯಾರು ಜೈಲಿಗೆ ಹೋಗಿಲ್ವಾ? ದೇಶದಲ್ಲಿ ಯಾರು ಶಿಕ್ಷೆ ಅನುಭವಿಸಿಲ್ವ?ಎಂದು ಬರೆದಿದ್ದಾರೆ.