ತೈಯಾನ್ : ಚೀನಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶಾಲಾ ಬಸ್ ವೊಂದು ನಿಯಂತ್ರಣ ಕಳೆದುಕೊಂದು ರಸ್ತೆ ಮೇಲೆ ನಿಂತಿದ್ದ ಜನರ ಮೇಲೆ ನುಗ್ಗಿದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ತೈಯಾನ್ ನಗರದಲ್ಲಿ ಸಾರ್ವಜನಿಕ ಶಾಲಾ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ನುಗ್ಗಿತು.ಘಟನೆಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಳಿಗ್ಗೆ 7 ಗಂಟೆಗೆ ತೈಯಾನ್ ನಗರದ ಮಧ್ಯಮ ಶಾಲೆಯ ಗೇಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಡಾಂಗ್‌ಪಿಂಗ್ ಕೌಂಟಿ ಪೊಲೀಸ್ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಡೊಂಗ್‌ಪಿಂಗ್ ಕೌಂಟಿಯ ಪೊಲೀಸ್ ಇಲಾಖೆ ಆರು ಪೋಷಕರು ಮತ್ತು ಐದು ಮಕ್ಕಳು ಸೇರಿದ್ದಾರೆ, ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.