ಬೆಂಗಳೂರು : ರಾಜ್ಯ ಸರ್ಕಾರದ ಒಂದೇ ಒಂದು ಆದೇಶಕ್ಕೆ 22 ಕೋಟಿ ರೂಪಾಯಿ ವಾಪಸ್ ವರ್ಷ ಗಟ್ಟಲ್ಲಿ ಬಾಕಿ ಇದ್ದ 22 ಕೋಟಿ ಹಣ ಸರ್ಕಾರದ ಇದೀಗ ಜಮಯಾಗಿದೆ. SBI ಬ್ಯಾಂಕ್ ನಿಂದ 9.67 ಕೋಟಿ ಸರ್ಕಾರದ ಖಜಾನೆಗೆ ಜಮೆಯಾಗಿದೆ ಹಾಗೂ ಪಿಎನ್‌ಬಿ ಇಂದ ಒಂದು ವರ್ಷದ ಬಡ್ಡಿ ಸಮೇತ 13.9 ಕೋಟಿ ಹಣ ಜಮೆ ಆಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಹಣ ಇದೀಗ ಪಾವತಿಯಾಗಿದೆ. ಕಳ್ಳಾಟ ಆಡುತ್ತಿದ್ದ SBI ಮತ್ತು PNB ಎರಡು ಬ್ಯಾಂಕ್ಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿತ್ತು. ಅಗಸ್ಟ್ ನಲ್ಲಿ ಎಸ್ ಬಿ ಐ ಹಾಗೂ ಪಿ ಎನ್ ಬಿ ವಿರುದ್ಧ ನಿರ್ಧಾರ ಕೈಗೊಂಡಿತ್ತು. ಎರಡು ಬ್ಯಾಂಗಳಲ್ಲಿದ್ದ ಸರ್ಕಾರದ ಎಲ್ಲಾ ಖಾತೆ ಕ್ಲೋಸ್ ಮಾಡಲು ನಿರ್ಧರಿಸಿತ್ತು. ಸರ್ಕಾರದ ನಿರ್ಧಾರಕ್ಕೆ ಕಂಗೆಟ್ಟು ಇದೀಗ ಬ್ಯಾಂಕುಗಳು ಹಣ ವಾಪಸ್ ನೀಡಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸದಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ ಬಿ) ಗಳಲ್ಲಿ ಇರಿಸಿರುವ ಎಲ್ಲ ಠೇವಣಿಗಳನ್ನು ಹಿಂಪಡೆಯಲು ರಾಜ್ಯ ಸರಕಾರ ನಿರ್ಧರಿಸಿತ್ತು. ಅಲ್ಲದೇ ಭವಿಷ್ಯದಲ್ಲಿ ಈ ಎರಡು ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ಠೇವಣಿ ಇಡದಂತೆ, ಹೂಡಿಕೆ ಮಾಡದಂತೆ ಹಣಕಾಸು ಇಲಾಖೆಯ ಮೂಲಕ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು.