ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಓಣಂ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ದಕ್ಷಿಣ ರೈಲ್ವೆ ಎರ್ನಾಕುಲಂ ಮತ್ತು ಯಲಹಂಕ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ರೈಲು ಸಂ. 06101 ಎರ್ನಾಕುಲಂ – ಯಲಹಂಕ ವಿಶೇಷ ರೈಲು ಎರ್ನಾಕುಲಂನಿಂದ 04.09 2024 ಮತ್ತು 06.09.2024 ರಂದು ಮಧ್ಯಾಹ್ನ 12.40 ಕ್ಕೆ ಹೊರಟು ಅದೇ ದಿನ ರಾತ್ರಿ 11 ಗಂಟೆಗೆ ಯಲಹಂಕವನ್ನು ತಲುಪುತ್ತದೆ.
ರೈಲು ಸಂ. 06102 ಯಲಹಂಕ – ಎರ್ನಾಕುಲಂ ವಿಶೇಷ ರೈಲು ಯಲಹಂಕದಿಂದ 05.09.2024 ಮತ್ತು 07.09.2024 ರಂದು ಬೆಳಿಗ್ಗೆ 05 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 02.20 ಕ್ಕೆ ಎರ್ನಾಕುಲಂ ತಲುಪುತ್ತದೆ.
ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ತ್ರಿಶೂರ್, ಪಾಲಕ್ಕಾಡ್, ಪೋದನೂರ್, ತಿರುಪ್ಪೂರ್, ಈರೋಡ್, ಸೇಲಂ, ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.
ಈ ವಿಶೇಷ ರೈಲು 09- ಎ.ಸಿ. 3ಟಯರ್ ಕೋಚ್‌ಗಳು, 02- ಎ.ಸಿ. ಚೇರ್ ಕಾರ್ ಮತ್ತು 02- ಎ.ಸಿ ಅಂಗವಿಕಲ ಸ್ನೇಹಿ ಕೋಚ್ ಸಹಿತ ಬ್ರೇಕ್/ಜನರೇಟರ್ ಕಾರ್ ಅನ್ನು ಒಳಗೊಂಡಿರುತ್ತದೆ.
BREAKING: ‘ಹೋಂ ಸ್ಟೇ’ ಸೇರಿ ಎಲ್ಲಾ ‘ಅರಣ್ಯ ಒತ್ತುವರಿ’ ತೆರವುಗೊಳಿಸಿ: ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ
ಸರ್ವರ ಶ್ರಮದಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ: ದಿನೇಶ್ ಗೂಳಿಗೌಡ
BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!