ಹಾವೇರಿ : ರಾಣೇಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರು ಅಡ್ಡಗಟ್ಟಿದ್ದ ಆರೋಪದಡಿ ಗ್ರಾಮಸ್ಥರ ವಿರುದ್ಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ದೇವರಗುಡ್ಡಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಎಂ ಪ್ರಯಾಣಿಸುತ್ತಿದ್ದ ಕಾರು ಅಡ್ಡಗಟ್ಟಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಚನ್ನಬಸಪ್ಪ ಹಡಪದ ಅವರು ದೂರು ನೀಡಿದ್ದರು. ಹೀಗಾಗಿ ಕಾಕೊಳ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆಗಸ್ಟ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಹನದಲ್ಲಿ ಕಾಕೋಳ ಗ್ರಾಮದ ಕಡೆಯಿಂದ ದೇವರಗುಡ್ಡದತ್ತ ಹೊರಟಿದ್ದರು. ದೇವರಗುಡ್ಡದ ದ್ವಾರಬಾಗಿಲು ಬಳಿ ಗ್ರಾಮಸ್ಥರು ಕಾರು ಅಡ್ಡಗಟ್ಟಿದ್ದರು.