ಕಲಬುರ್ಗಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅದರಲ್ಲಿ ನಟ ದರ್ಶನ್ ಆಪ್ತ ಹಾಗೂ ಕೊಲೆ ಪ್ರಕರಣದ 11ನೇ ಆರೋಪಿಯಾಗಿರುವ ನಾಗರಾಜನನ್ನು ಕಲ್ಬುರ್ಗಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಕಲ್ಬುರ್ಗಿ ಸೆಂಟ್ರಲ್ ಜೈಲಿಗೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಭೇಟಿ ನೀಡಿದ್ದಾರೆ.
ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ನಾಗರಾಜ್ ನನ್ನು ಕಲ್ಬುರ್ಗಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಕಲ್ಬುರ್ಗಿ ಸೆಂಟ್ರಲ್ ಜೈಲಿಗೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಇದೀಗ ಭೇಟಿ ನೀಡಿದ್ದಾರೆ. ಜೈಲು ಅಧೀಕ್ಷಕ ಡಾ. ರಂಗನಾಥರಿಂದ ಮಾಹಿತಿ ಪಡೆದರು. 11ನೇ ಆರೋಪಿ ನಾಗರಾಜ್ ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ 11ನೇ ಆರೋಪಿ ದರ್ಶನ್ ಆಪ್ತ ನಾಗರಾಜ್ ಎಂದು ಹೇಳಲಾಗುತ್ತಿದೆ.