ಬೆಂಗಳೂರು: ಬಿಬಿಎಂಪಿಯಿಂದ ಬರಬೇಕಿರುವಂತ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ನಾಳೆಯಿಂದ ಗುತ್ತಿಗೆದಾರರು ಎಲ್ಲಾ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಈ ಮೂಲಕ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಗುತ್ತಿಗೆದಾರರ ಸಂಘದಿಂದ ಮಾಹಿತಿ ನೀಡಲಾಗಿದ್ದು, ಬಿಬಿಎಂಪಿಯಿಂದ ಶೇ.75ರಷ್ಟು ಕಾಮಗಾರಿಯ ಬಿಲ್ ಬಿಡುಗಡೆ ಮಾಡಲಾಗಿದೆ. ಇನ್ನೂ ಶೇ.25ರಷ್ಟು ಬಿಲ್ ಬಾಕಿ ಇದೆ. ಇದನ್ನು ಬಿಡುಗಡೆ ಮಾಡುವವರೆಗೂ ಎಲ್ಲಾ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.
ಗುತ್ತಿಗೆದಾರರು ನಡೆಸಿದಂತ ಕಾಮಗಾರಿಯ ಬರೋಬ್ಬರಿ 1600 ಕೋಟಿ ಹಣ ಬಾಕಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಳಿಸಿಕೊಂಡಿದೆ. ಕಳೆದ 2 ವರ್ಷದಿಂದ ಬಿಲ್ ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಲ್ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿತ್ತು ಎಂದಿದೆ.
ಈವರೆಗೆ ಶೇ.25ರಷ್ಟು ಬಾಕಿ ಇರುವಂತ ಕಾಮಗಾರಿ ಬಿಲ್ ಅನ್ನು ಬಿಬಿಎಂಪಿ ಬಿಡುಗಡೆ ಮಾಡಿಲ್ಲ. ಈ ಹಿನ್ನಲೆಯಲ್ಲಿ ಬಾಕಿ ಬಿಲ್ ಪಾವತಿಯಾಗುವವರೆಗೂ ನಾಳೆಯಿಂದ ಮುಷ್ಕರ ನಡೆಸಲಾಗುತ್ತಿದೆ. ಗುತ್ತಿಗೆದಾರರಿಂದ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದೆ.
ಮಹಿಳೆಯರಿಗೆ ‘ಉಚಿತ LPG ಸಿಲಿಂಡರ್’: ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡ, ದಾಖಲೆಗಳೇನು? ಇಲ್ಲಿದೆ ಮಾಹಿತಿ
ಅ. 1ರಂದು ಮೋದಿ ಅಂಡ್ ಕಂಪನಿಗೆ ಜಮ್ಮು-ಕಾಶ್ಮೀರದ ಯುವಕರು ನಿರ್ಗಮನ ದ್ವಾರ ತೋರಿಸಲಿದ್ದಾರೆ: ಖರ್ಗೆ