ಮಂಡ್ಯ : ಬಾಲಕಿಗೆ ಅದೇ ಗ್ರಾಮದ ಬಾಲಕರು ಹಿಂದೆ ಬಿದ್ದು ನನ್ನನ್ನು ಪ್ರೀತಿಸು ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರವಾಗಿ ಬಾಲಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಇದರಿಂದ ಮನನೊಂದ ಬಾಲಕಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ.
ಹೌದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಾಲಕರಿಂದ ಕಿರುಕುಳ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಇಂಪನಾ (15) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ ಎಂದು ತಿಳಿದುಬಂದಿದೆ. ಪ್ರೀತಿಸುವ ವಿಚಾರವಾಗಿ ಬಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಹನಕೆರೆ ಗ್ರಾಮದ ಬಾಲಕರು ಪ್ರೀತಿಸುವಂತೆ ಬಾಲಕಿಗೆ ಒತ್ತಾಯ ಮಾಡಿದ್ದಾರೆ.ಬಾಲಕರ ಮಾತಿನ ಚಕಮಕಿಯ ಆಡಿಯೋ ಕೂಡ ವೈರಲ್ ಆಗಿತ್ತು. ಬಾಲಕಿ ತಾಯಿಯ ವಾಟ್ಸಪ್ ಗೆ ಬಾಲಕರು ಅವರು ಮಾತನಾಡಿರುವ ಆಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ಇಂಪನಾ ನೇಣಿಗೆ ಶರಣಾಗಿದ್ದಾಳೆ. ಘಟನೆಯ ಬಳಿಕ ಬಾಲಕರು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.