ಬೆಂಗಳೂರು: ಈವರೆಗೆ ಪೂರ್ವ ಮುದ್ರಿತ ಬಸ್ ಪಾಸ್ ವಿತರಿಸುತ್ತಿದ್ದಂತ ಬಿಎಂಟಿಸಿ, ಇನ್ಮುಂದೆ ಡಿಜಿಟಲ್ ಬಸ್ ಪಾಸ್ ವಿತರಿಸಲಿದೆ. ಈ ಡಿಜಿಟಲ್ ಬಸ್ ಪಾಸ್ ಅನ್ನು ಮೊಬೈಲ್ ಆಪ್ ನಲ್ಲೇ ಪಡೆಯಬಹುದಾಗಿದೆ. ಹಾಗಾದ್ರೇ ಡಿಜಿಟಲ್ ಬಿಎಂಟಿಸಿ ಬಸ್ ಪಾಸ್ ಪಡೆಯೋದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ಮೊಬೈಲ್ ಆ್ಯಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಪಾಸುಗಳು ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಡಿಜಿಟಲ್ ವ್ಯವಸ್ಥೆಯಲ್ಲಿ ಪಾಸುಗಳ ವಿತರಣೆಯಾಗಲಿದೆ.
ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಟುಮ್ಯಾಕ್ ಆ್ಯಪ್ (Tummoc App) ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಪಾಸ್ ಆಯ್ಕೆ ಮಾಡಿಕೊಂಡು ವಿವರ ಭರ್ತಿ ಮಾಡಿ ಭಾವಚಿತ್ರ ಸಹಿತ ಅಪ್‌ಲೋಡ್ ಮಾಡಬೇಕು. ದೃಢೀಕರಣಗೊಂಡ ಬಳಿಕ ಪಾಸ್ ಮೊತ್ತ ಪಾವತಿಸಬೇಕು. ದೈನಿಕ ಪಾಸುಗಳನ್ನು ಇ.ಟಿ.ಎಂ ಯಂತ್ರದ ಮೂಲಕ ನಿರ್ವಾಹಕರಿಂದ ಪಡೆದುಕೊಳ್ಳಬಹುದು.
BMTC ಡಿಜಿಟಲ್ ಬಸ್ ಪಾಸ್ ಪಡೆಯಲು ಈ ಹಂತಗಳನ್ನು ಅನುಸರಿಸಿ
- ಪ್ಲೇ ಸ್ಟೋರ್ ನಲ್ಲಿ ಟುಮ್ಯಾಕ್ ಆ್ಯಪ್ (Tummoc app) ಡೌನ್ ಲೋಡ್ ಮಾಡಿಕೊಂಡು ನೋಂದಣಿಯಾಗುವುದು.
- ದೈನಿಕ / ಸಾಪ್ತಾಹಿಕ / ಮಾಸಿಕ ಪಾಸನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರವನ್ನು ಕ್ಲಿಕ್ಕಿಸುವುದು.
- ಪಾಸು ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಪಾಸು ಲಭ್ಯವಾಗುವುದು.
- ಡಿಜಿಟಲ್ ಪಾಸಿನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸುವುದು ಹಾಗೂ ವಾಹನಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸಿನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗಳಿಗೆ ತೋರಿಸುವುದು,
- ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.in ವೆಬ್ಸೈಟನ್ನು ಸಂಪರ್ಕಿಸುವುದು.
ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ಮೊಬೈಲ್ ಆ್ಯಪ್ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಪಾಸುಗಳು ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಡಿಜಿಟಲ್ ವ್ಯವಸ್ಥೆಯಲ್ಲಿ ಪಾಸುಗಳ ವಿತರಣೆಯಾಗಲಿದೆ.
ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ಟುಮ್ಯಾಕ್ ಆ್ಯಪ್… pic.twitter.com/c17rWLIE8j
— DIPR Karnataka (@KarnatakaVarthe) August 31, 2024
ಗಮನಿಸಿ: ಸೆ.1ರ ಭಾನುವಾರವೂ ‘BESCOM’ ಕ್ಯಾಶ್ ಕೌಂಟರ್ ಓಪನ್, ‘ವಿದ್ಯುತ್ ಬಿಲ್’ ಪಾವತಿಗೆ ಅವಕಾಶ | BESCOM