ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ(ವಾರ) ಹಾಗೂ ಮಾಸಿಕ ಪಾಸುಗಳನ್ನು ಪೂರ್ವ ಮುದ್ರಿತ ಮಾದರಿಯಲ್ಲಿ ಮತ್ತು ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡಲಾಗುತ್ತಿದೆ.
ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಸ್ತುತ ಸಂಸ್ಥೆಯು ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳು ಸಾರ್ವಜನಿಕ ಪ್ರಯಾಣಿಕರಿಗೆ ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಪಾಸುಗಳನ್ನು ಪೂರ್ಣ ಪ್ರಮಾಣದಲ್ಲಿ ದಿನಾಂಕ 15.09.2024 ರಿಂದ ಅನ್ವಯವಾಗುವಂತೆ ಡಿಜಿಟಲ್ ವ್ಯವಸ್ಥೆಯಲ್ಲಿ ಮೊಬೈಲ್ ಆåಪ್ (Mobile app) ಮುಖಾಂತರ ವಿತರಿಸಲು ಕ್ರಮ ಕೈಗೊಂಡಿರುತ್ತದೆ ಎಂದು ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಡಿಜಿಟಲ್ ಪಾಸು ಪಡೆಯುವ ವಿಧಾನ
- ಪ್ಲೇ ಸ್ಟೋರ್ ನಲ್ಲಿ ಟುಮ್ಯಾಕ್ ಆ್ಯಪ್ (Tummoc app) ಡೌನ್ ಲೋಡ್ ಮಾಡಿಕೊಂಡು ನೋಂದಣಿಯಾಗುವುದು.
- ದೈನಿಕ / ಸಾಪ್ತಾಹಿಕ / ಮಾಸಿಕ ಪಾಸನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರವನ್ನು ಕ್ಲಿಕ್ಕಿಸುವುದು.
- ಪಾಸು ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಪಾಸು ಲಭ್ಯವಾಗುವುದು.
- ಡಿಜಿಟಲ್ ಪಾಸಿನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸುವುದು ಹಾಗೂ ವಾಹನಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸಿನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗಳಿಗೆ ತೋರಿಸುವುದು,
- ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.in ವೆಬ್ಸೈಟನ್ನು ಸಂಪರ್ಕಿಸುವುದು.
ಸರ್ಕಾರಿ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ‘ಶಿಕ್ಷಣ ಸಚಿವ ಮಧು ಬಂಗಾರಪ್ಪ’
ನಿವೇಶನ ಲೂಟಿ ಮಾಡುತ್ತಿರುವುದು ನಾನಾ ನೀವಾ?: ಎಂ.ಬಿ.ಪಾಟೀಲರಿಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays