ಬೆಂಗಳೂರು : ಬಿಎಂಟಿಸಿ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯವನ್ನು ಇಂದು ಸಚಿವ ರಾಮಲಿಂಗ ರೆಡ್ಡಿ ಅನಾವರಣಗೊಳಿಸಿದ್ದಾರೆ.
ಮೆಟ್ರೊ ಫೀಡರ್ ಕ್ಯೂಆರ್ ಸ್ಕ್ಯಾನರ್ ಅತ್ಯಂತ ಸುಲಭವಾಗಿ ಮೆಟ್ರೊ ಫೀಡರ್ ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ QR ಕೋಡ್ಗಳ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ (Live tracking) ಮಾಹಿತಿ ದೊರೆಯುತ್ತದೆ.
ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ ಎಂದು ತಿಳಿದ್ದಾರೆ.
ಗಣಕ ಇಲಾಖೆಯ ಸಹಯೋಗದೊಂದಿಗೆ ತಂತ್ರಙ್ಞಾನವನ್ನು ಬಳಸಿ ಭವಿಷ್ಯನಿಧಿಯ ಚೀಟಿಗಳನ್ನು ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ (Employee Management System) ಮುಖಾಂತರ 2022-2023ನೇ ಸಾಲಿನಿಂದ ಪ್ರಾಯೋಗಿಕವಾಗಿ ಆಂತರಿಕವಾಗಿಯೇ ಪತ್ರಿ ನೌಕರನು ತನ್ನ ಮೊಬೈಲ್ ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನು ನಮೂದಿಸಿ ತಮ್ಮ ಖಾತೆಯಲ್ಲಿರುವ ಪಿ.ಎಫ್, ವಿ.ಪಿ.ಎಫ್, ಬಡ್ಡಿ ಮೊತ್ತ ಮತ್ತು ಮುಂಗಡಗಳ ವಿವರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂದಭರ್ದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಆರ್, ಭಾ.ಆ.ಸೇ, ಶ್ರೀಮತಿ ಶಿಲ್ಪಾ.ಎಂ, ಭಾ.ಆ.ಸೇ, ಶ್ರೀಮತಿ ಮಂಜುಶ್ರೀ .ಆರ್, ಮುಖ್ಯ ಲೆಕ್ಕಾಧಿಕಾರಿ, ಶ್ರೀ ಸದಾನಂದ.ಕೆ.ಜಿ, ಮುಖ್ಯ ಗಣಕ ವ್ಯವಸ್ಥಾಪಕರು, ಮತ್ತು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.







