ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 16 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ( KAS Officer Transfer ) ಮಾಡಿ ಆದೇಶಿಸಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕೆಳಕಂಡ ಕೆ.ಎ.ಎಸ್ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
ವರ್ಗಾವಣೆಗೊಂಡ 16 ಕೆಎಎಸ್ ಅಧಿಕಾರಿಗಳು
1. ವೀರಭದ್ರ ಹಂಚಿನಾಳ -ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
2. ದಿನೇಶ್ ಕುಮಾರ್ ಜಿಟಿ –ಕುಲಸಚಿವರು(ಆಡಳಿತ), ಹಾವೇರಿ ವಿಶ್ವವಿದ್ಯಾಲಯ
3. ಅನುರಾಧ ಜಿ. -ಮುಖ್ಯ ಆಡಳಿತಾಧಿಕಾರಿ, ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ
4. ರಾಘವೇಂದ್ರ ಟಿ –ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು.
5. ಚಿದಾನಂದ ಸದಾಶಿವ ವಠಾರೆ -ಮುಖ್ಯ ಆಡಳಿತಾಧಿಕಾರಿ, ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟಾಲಜಿ ಸೆನ್ಸಸ್ ಅಂಡ್ ಅರ್ಗನ್ ಟ್ರಾನ್ಸ್ ಪ್ಲಾಂಟ್, ಬೆಂಗಳೂರು.
6. ಮಹಾದೇವ ಎ ಮುರಗಿ –ಕುಲಸಚಿವರು(ಆಡಳಿತ), ತೋಟಗಾರಿಕೆ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ, ಬಾಗಲಕೋಟೆ(ಪ್ರಭಾರ)
7. ರವಿಕುಮಾರ್ ಪಿ.- ಪ್ರಧಾನ ವ್ಯವಸ್ಥಾಪಕರು(ಆಡಳಿತ) ಕೃಷ್ಣ ಭಾಗ್ಯ ಜಲ ನಿಗಮ, ಬೆಂಗಳೂರು.
8. ಡಾ. ಶಂಕರಪ್ಪ ವಣಿಕ್ಯಾಳ್ –ಕುಲಸಚಿವರು(ಆಡಳಿತ), ರಾಯಚೂರು ವಿಶ್ವವಿದ್ಯಾಲಯ
9. ಗೀತಾ ಇ. ಕೌಲಗಿ -ಕುಲ ಸಚಿವರು(ಆಡಳಿತ), ಬಾಗಲಕೋಟೆ ವಿಶ್ವವಿದ್ಯಾಲಯ, ಬಾಗಲಕೋಟೆ.
10. ಶ್ರೀ ಹರ್ಷ ಶೆಟ್ಟಿ- ವಿಶೇಷ ಅಧಿಕಾರಿ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ.
11. ಶೇಖರ್ ಜಿ.ಡಿ. –ಉಪನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ, ಬೆಂಗಳೂರು.
12.ಮಂಜುನಾಥ ಎಂ.ಎನ್. -ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು
13.ಉದಯ ಬಿ. ಕುಂಬಾರ -ವಿಶೇಷ ಭೂಸ್ವಾಧೀನ ಅಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬೀಳಗಿ, ಬಾಗಲಕೋಟೆ ಜಿಲ್ಲೆ.
14.ಬಿ.ಆರ್. ದಯಾನಂದ -ಪ್ರಧಾನ ವ್ಯವಸ್ಥಾಪಕರು(ಆಡಳಿತ ಮತ್ತು ಮಾನವ ಸಂಪನ್ಮೂಲ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು
15. ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ -ವಿಶೇಷ ಭೂಸ್ವಾಧೀನಾಧಿಕಾರಿ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ, ಚಿತ್ರದುರ್ಗ
16. ನಿತಿನ್ ಚಕ್ಕಿ –ಆಡಳಿತಾಧಿಕಾರಿ, ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು