ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ ಬಿಎಂಟಿಸಿ ಸಾರಿಗೆ ಬಸ್ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ನೀಡಿದ್ದು, ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮಾರ್ಗವನ್ನು ದಿನಾಂಕ 29.08.2024 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸು/ ಸುತ್ತುವಳಿಗಳ ಸಂಖ್ಯೆ |
251 | ಕೃ.ರಾ. ಮಾರುಕಟ್ಟೆ | ಶಿವಕೋಟೆ | ಯಶವಂತಪುರ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೇಸರಘಟ್ಟ ಟಿ. ಬಿ. ಕ್ರಾಸ್, ಮುತ್ಕೂರು ಕ್ರಾಸ್. | 1 ಬಸ್ಸು
08 ಸುತ್ತುವಳಿಗಳು
|
ಸದರಿ ಮಾರ್ಗದ ವೇಳಾಪಟ್ಟಿ ವಿವರಗಳ ಈ ಕೆಳಗಿನಂತಿದೆ.
ಕೃ.ರಾ. ಮಾರುಕಟ್ಟೆ/ಯಶವಂತಪುರ ಬಿಡುವ ವೇಳೆ |
0600, 1410, 1710, 2030 |
ಶಿವಕೋಟೆ ಬಿಡುವ ವೇಳೆ |
0425, 0740, 1555, 1850 |
ಶಾಸಕ ಗಣಿಗ ರವಿ ವಿರುದ್ಧ ಕೇಂದ್ರ ಸಚಿವ HD ಕುಮಾರಸ್ವಾಮಿ ಈ ಗಂಭೀರ ಆರೋಪ
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!