ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಹೊಸನಗರ ತಾಲ್ಲೂಕಿನ ತ್ರೈಮಾಸಿಕ ಕೆಡಿಪಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಇಂತಹ ನಾಗೇಂದ್ರ ಜೋಗಿ ಅವರಿಗೆ ನಿಟ್ಟೂರು ಗ್ರಾಮಸ್ಥರಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.
ಇಂದು ನಿಟ್ಟೂರಿನಲ್ಲಿ ನೂತನವಾಗಿ ಹೊಸನಗರ ತಾಲೂಕು ತ್ರೈಮಾಸಿಕ ಕೆ ಡಿ ಪಿ ಸದಸ್ಯರಾಗಿ ನಾಮನಿರ್ದೇಶನಗೊಂಡ ನಮ್ಮ ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷರು ನಮ್ಮ ಆತ್ಮೀಯರು ಆಗಿರುವ ನಾಗೇಂದ್ರ ಜೋಗಿ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಾಮನಿರ್ದೇಶನ ಮಾಡಿದ ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ನಿಟ್ಟೂರು ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದರು. ಇದೇ ವೇಳೆ ನಾಮನಿರ್ದೇಶನಕ್ಕೆ ಸಹಕರಿಸಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಬಿಜಿ ಚಂದ್ರಮೌಳಿ ಗೌಡ ಹಾಗೂ ನಗರ ಹೋಬಳಿಯ ಯುವ ಮುಖಂಡರು ನಮ್ಮ ನಾಯಕರು ಆಗಿರುವ ಮಾಸ್ತಿಕಟ್ಟೆ ಸುಬ್ರಮಣ್ಯ ಇವರಿಗೆ ನಿಟ್ಟೂರು ಘಟಕದ ಪರವಾಗಿ ಧನ್ಯವಾದಗಳು ತಿಳಿಸಲಾಯಿತು.
ಈ ವೇಳೆ ಮಾತನಾಡಿದಂತ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್, ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಕರ್ತರನ್ನೂ ಗುರುತಿಸಿ, ತಾಲ್ಲೂಕು ಮಟ್ಟದ ಜವಾಬ್ದಾರಿಯನ್ನು ನೀಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಚಂದಯ್ಯ ಜೈನ, ಶೋಭಾ ಉದಯ್ ಕುಮಾರ್, ಯಶೋದಮ್ಮ, ರಾಘವೇಂದ್ರ ಆಚಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿರಾಗಿರುವ ಮಂಜಪ್ಪ ಬೆನ್ನಟ್ಟಿ, ನಿಟ್ಟೂರು ಬೂತ್ ಸಮಿತಿಯ ಅಧ್ಯಕ್ಷರಾಗಿರುವ ಜೆವಿ ಸುಬ್ರಹ್ಮಣ್ಯ, ಕೆ ಬಿ ಸರ್ಕಲ್ ಭೂತ್ ಸಮಿತಿಯ ಅಧ್ಯಕ್ಷರಾಗಿರುವ ಓಂಕಾರ್ ತೋರಗೋಡು, ಪಿಎಸಿಎಸ್ ನಿಟ್ಟೂರು ಉಪಾಧ್ಯಕ್ಷರಾಗಿರುವ ರವೀಂದ್ರ ಚನ್ನಪ್ಪ ಹಾಗೂ ನಿಟ್ಟೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಉದಯ್ ಪೂಜಾರಿ, ಯುವ ಮುಖಂಡ ಕುಂಬ್ಳೆ ರಾಘು, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ನಾಗೋಡಿ ವಿಶ್ವನಾಥ್, ಹೊಸನಗರ
ಜಿಯೋಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ | Paris Paralympic Games 2024
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!