ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆ ಒಪ್ಪಂದಕ್ಕೆ ಬಂದಿವೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ತಮ್ಮ ಮೈತ್ರಿಯನ್ನು ಘೋಷಿಸಿದ ಉಭಯ ಪಕ್ಷಗಳು ಕೇಂದ್ರಾಡಳಿತ ಪ್ರದೇಶದ 90 ಸ್ಥಾನಗಳಲ್ಲಿ 85 ಸ್ಥಾನಗಳ ಬಗ್ಗೆ ಒಪ್ಪಂದಕ್ಕೆ ಬಂದಿವೆ.
85 ಸ್ಥಾನಗಳಲ್ಲಿ ಕಾಂಗ್ರೆಸ್ 33 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ನ್ಯಾಷನಲ್ ಕಾನ್ಫರೆನ್ಸ್ 52 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು 5 ಸ್ಥಾನಗಳಲ್ಲಿ ಸ್ನೇಹಪರ ಹೋರಾಟ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.
2019ರ ಆಗಸ್ಟ್’ನಲ್ಲಿ 370 ನೇ ವಿಧಿಯನ್ನ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.
ಪಾಕಿಸ್ತಾನ ತಂಡಕ್ಕೆ ಬಿಗ್ ಶಾಕ್ ; ಬಾಂಗ್ಲಾ ವಿರುದ್ಧ ಸೋಲಿನ ಬಳಿಕ ‘ICC’ಯಿಂದ ದೊಡ್ಡ ಶಿಕ್ಷೆ
‘ಗೌರಿ ಹಾಗೂ ಗಣೇಶ ಹಬ್ಬ’ ಆಚರಣೆ ಕುರಿತು ಸಾರ್ವಜನಿಕರಿಗೆ ಮಹತ್ವದ ಮಾಹಿತಿ | Ganesh Chaturthi 2024
ಅಯೋಧ್ಯೆ ‘ರಾಮಲಲ್ಲಾ ಪ್ರತಿಷ್ಠಾಪನೆ’ಗೆ 113 ಕೋಟಿ ವೆಚ್ಚ : ದೇಗುಲದ ವೆಚ್ಚ 1,800 ಕೋಟಿ ರೂ.ಗೆ ಏರಿಕೆ