ಬೆಂಗಳೂರು : ರೌಡಿ ಶೀಟರ್ ಗಳ ಜೊತೆಗೆ ಕುಳಿತು ನಟ ದರ್ಶನ್ ಸಿಗರೇಟ್ ಸೇದುತ್ತಿರುವ ದೃಶ್ಯ ವೈರಲ್ ಆಗಿತ್ತು. ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯದ ವ್ಯವಸ್ಥೆ ಇದೆ ಎಂಬ ವೈರಲ್ ಫೋಟೋ ಬಗ್ಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯಿಸಿದ್ದಾರೆ. ಆ ಫೋಟೋ ನಕಲಿ ಎಂದ ಅವರು, ದರ್ಶನ್ ಅಳುತ್ತಿರುವ ಫೋಟೋ ಸಿಗ್ಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಂದಕಿಶೋರ್, ಇದು ಯಾವುದೋ ಒಂದು ಕ್ಷಣದ ಭಾಗವಷ್ಟೇ. ಅವರು ಒಳಗಡೆ ಯಾವ ಮನಸ್ಥಿತಿಯಲ್ಲಿ ಇದ್ದಾರೆ ಅನ್ನೋದೇ ಇಲ್ಲಿ ಮುಖ್ಯ. ಹಾಗಿದ್ರೆ ಅವರು ಆಳುತ್ತಿರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ? ಅವರು ಬೇಜಾರಲ್ಲಿ ಇರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರು ಮನೆಯಿಂದ ದೂರವಾಗಿ, ಮಗನಿಂದ ದೂರವಾಗಿ ಎಷ್ಟು ನೋವು ಅನುಭವಿಸುತ್ತಿರುತ್ತಾರೆ. ಇನ್ನು ರೌಡಿಶೀಟರ್ ವಿಲ್ಸನ್ ಗಾರ್ಡನ್ ಮಂಜ ಕುಳ್ಳ ಸೀನಾ ಅವರೊಟ್ಟಿಗೆ ಸೇರಿ ಕಾಫಿ ಕುಡಿಯುವ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಇರುವ ಜಾಗ ಎಂಥದ್ದು ಅನ್ನೋದಕ್ಕಿಂತ ಮೊದಲು ಅಲ್ಲಿ ಸಾಧು ಸಂತರು ಇರ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ.
ಈಗ ಟೆಕ್ನಾಲಜಿ ಒಳಗೆ ಏನು ಬೇಕಾದ್ರ ಮಾಡಬಹುದು. ನಾನು ಇದನ್ನು ವೈಯಕ್ತಿಕವಾಗಿ ನಂಬೋದಿಲ್ಲ. ಜೈಲಲ್ಲಿ ಅಷ್ಟೊಂದು ಸೆಕ್ಯುರಿಟಿ ಮಧ್ಯದಲ್ಲಿ ಯಾರೋ ಇಬ್ಬರು ಕುಳಿತುಕೊಳ್ತಾರೆ ಏನೋ ಮಾಡುತ್ತಾರೆ ಅನ್ನೋದು ಸರಿಯಲ್ಲ. ಸರ್ಕಾರದಿಂದ ಅವರಿಗೆ ಬೆಡ್ ಊಟ ಕೊಟ್ಟಿಲ್ಲದೆ ಇರಬಹುದು. ಅವರು ಏನು ತಿನ್ನುತ್ತಿದ್ದಾರೆ ಏನು ಮಾಡ್ತಿದ್ದಾರೆ ಅಂತ ಗೊತ್ತಿಲ್ಲ.
ಯಾರೋ ಒಬ್ಬರು ಕುಳಿತುಕೊಂಡ ತಕ್ಷಣ ಅವರಿಗೆ ರಾಜಾತಿಥ್ಯ ಕೊಟ್ಟಿದ್ದಾರೆ ಅನ್ನೋದು ಸರಿಯಲ್ಲ. AI ಟೆಕ್ನಾಲಜಿ ಬಂದ ಮೇಲೆ ಮಾರ್ಫಿಂಗ್ ಪೋಟೋ ಬರ್ತಿದೆ. ನಿಮಗೆ ಗೊತ್ತಿರುವಂತೆ ಎಷ್ಟೊಂದು ಮಾರ್ಫಿಂಗ್ ಪೋಟೋ ಬಂದಿದೆ. ನಮ್ಮ ಜೊತೆ ಇಲ್ಲದೆ ಇರುವ ನಾಯಕರ ಪೋಟೋ ಕೂಡ ಸಿನಿಮಾದಲ್ಲಿ ಹಾಕಬಹುದು. ನನ್ನ ಪ್ರಕಾರ ಇದು ಫೇಕ್ ಪೋಟೋ ಎಂದು ನಂದಕಿಶೋರ್ ಹೇಳಿದ್ದಾರೆ.