ಬೆಂಗಳೂರು : ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಜನರು ನಮ್ಮನ್ನು ಗುರುತಿಸಲಿ ಎಂದು ಎಂತೆಂತಹ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದೀಗ ಪ್ರೇಮಿಗಳು ಇಬ್ಬರು ಹುಚ್ಚಾಟ ಮೆರೆದಿದ್ದು, ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಯುವಕನೊಬ್ಬ ಡೆಡ್ಲಿ ರೈಡ್ ನಡೆಸಿರುವಂತಹ ಘಟನೆ ನಡೆದಿದೆ.
ಹೌದು ಬೆಂಗಳೂರಿನಲ್ಲಿ ಬೈಕ್ ಮೇಲೆ ಕೂತು ಪ್ರೇಮಿಗಳ ಹುಚ್ಚಾಟ ಮೆರೆದಿದ್ದಾರೆ. ಯಲಹಂಕದ ರೇವಾ ಕಾಲೇಜ್ ಬಳಿ ಈ ಒಂದು ಘಟನೆ ನಡೆದಿದೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿ ಜಾಲಿ ರೈಡ್ ಮಾಡಿದ್ದು, ಬೆಂಗಳೂರಿನಲ್ಲಿ ಪ್ರೇಮಿಗಳ ಡೆಡ್ಲಿ ಬೈಕ್ ರೈಡ್ ನಡೆಸಿದ್ದಾರೆ.
ತಾವು ಬೈಕ್ ಚಾಲನೆ ಮಾಡುವಾಗ ಮುಂದೆ ಆಗುವಂತಹ ಅನಾಹುತಗಳು ಬಗ್ಗೆ ಆಗಲಿ, ಅಥವಾ ಅಪಘಾತಗಳ ಬಗ್ಗೆ ಆಗಲಿ ಅರಿವು ಇದ್ದರೂ ಕೂಡ ಈ ರೀತಿ ಹುಚ್ಚಾಟಗಳನ್ನು ಮೆರೆಯುತ್ತಿದ್ದಾರೆ. ಅಕ್ಕ ಪಕ್ಕದ ಸವಾರರಿಗೂ ತೊಂದರೆ ಆಗುತ್ತದೆ ಈ ರೀತಿ ಮಾಡಬಾರದು ಎಂಬ ಪರಿಜ್ಞಾನ ಇಲ್ಲದೆ ಈ ರೀತಿ ಯುವ ಸಮೂಹ ಹುಟ್ಟಾಟದಲ್ಲಿ ಮುಳುಗಿದೆ. ಡೆಡ್ಲಿ ರೆಡ್ ಕುರಿತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಒಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.