ಕಲಬುರ್ಗಿ : ಕಲಬುರ್ಗಿ ನಗರದ ರಾಜಪುರ ಬಡಾವಣೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯದ ಸರ್ಕಾರದ ಜಮೀನು ಕುರುಬ ಸಂಘಕ್ಕೆ ನೀಡಿದ್ದಕ್ಕೆ ಇದೀಗ SFI ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹೌದು ಕಲ್ಬುರ್ಗಿಯಲ್ಲಿ ಈ ಕುರಿತಂತೆ ಎಸ್ಎಫ್ಐ ಸಂಘಟನೆಯಿಂದ ಉಗ್ರ ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಸುಮಾರು 3.7 ಎಕ್ರೆ ಭೂಮಿಯನ್ನು ಪರಭಾರಿ ಮಾಡಲು ಸಂಪುಟ ಸಭೆ ನಿರ್ಣಯಿಸಿತ್ತು. ಸರ್ಕಾರಿ ಮಹಾವಿದ್ಯಾಲಯದ ಜಮೀನನ್ನು, ಕರ್ನಾಟಕ ಪ್ರದೇಶ ಕುರುಬ ಸಂಘಕ್ಕೆ ನೀಡಲು ಸಂಪುಟ ಸಭೆ ನಿರ್ಣಯಿಸಿತ್ತು.
ಕಲ್ಬುರ್ಗಿ ನಗರದ ರಾಜಪುರ ಬಡಾವಣೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯ ಕಾಲೇಜಿನ ಜಮೀನು ಖಾಸಗಿ ಸಂಘಕ್ಕೆ ನೀಡಿದಕ್ಕೆ ಇದೀಗ ತೀವ್ರಖಂಡನೆ ವ್ಯಕ್ತವಾಗುತ್ತಿದೆ. ಒಟ್ಟು 33 ಎಕರೆಯಲ್ಲಿ 3.7 ಎಕರೆ ನೀಡಲು ಸಂಪುಟ ಸಭೆ ನಿರ್ಣಯಿಸಿತ್ತು. ಸಚಿವ ಸಂಪುಟದ ನಿರ್ಣಯದ ವಿರುದ್ಧ ಇದೀಗ ಎಸ್ಎಫ್ಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರಿ ಕಾಲೇಜಿನ ಜಾಗ ಕುರುಬ ಸಂಘಕ್ಕೆ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.ಶೈಕ್ಷಣಿಕ ಚಟುವಟಿಕೆಗೆ ಜಾಗವಿಲ್ಲ ಅಂತಹದ್ರಲ್ಲಿ 3.7 ಎಕರೆ ಕೊಟ್ಟರೆ ಹೇಗೆ ತಕ್ಷಣವೇ ರಾಜ್ಯ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಸ್ ಎಫ್ ಐ ಸಂಘಟನೆ ಎಚ್ಚರಿಕೆ ನೀಡಿದೆ.